ಮೂಡುಬಿದಿರೆ: ಅವಿವಾಹಿತ ವ್ಯಕ್ತಿಯೋರ್ವರು ಪಕ್ಕದ ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಬೆಳುವಾಯಿ ಗ್ರಾಮದ ಬೈಲಬರಿ ನಿವಾಸಿ ಬಾಬು(34) ಆತ್ಯಹತ್ಯೆ ಮಾಡಿಕೊಂಡ ವ್ಯಕ್ತಿ. ಈ ಹಿಂದೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ವಾಸವಿದ್ದು ಪ್ರಸ್ತುತ ಕಳೆದ ಒಂದು ವರ್ಷದಿಂದ ಬೈಲಬರಿ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಒಂದು ದಿನದಿಂದ ನಾಪತ್ತೆಯಾಗಿದ್ದು ಮನೆಮಂದಿ ಪೊಲೀಸರಿಗೆ ದೂರು ನೀಡಿ ಹುಡುಕಾಟದಲ್ಲಿ ತೊಡಗಿದ್ದರು. ಬುಧವಾರ ಸಾಯಂಕಾಲ ಮನೆ ಪಕ್ಕದ ಪಾಳುಬಿದ್ದ ಮನೆಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಯಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *