ಮೂಡುಬಿದಿರೆ: ಅಹಿಂಸೆಯೇ ನಮ್ಮ ದೇಶದ ಲಾಂಛನ ಸಾಧನೆ ಎಂಬುದು ಸಂಸ್ಕಾರದಿಂದ ಮಾತ್ರ ಸಾಧ್ಯ. ಶುದ್ಧವಾದ, ನಿಸ್ವಾರ್ಥ ಭಾವದಿಂದ ಕಾರ್ಯಪ್ರವೃತ್ತರಾದರೆ ಭಗವಂತನೂ ಆಶೀರ್ವದಿಸುತ್ತಾನೆ. ಆದುದರಿಂದ ದೇಶದ ಪ್ರತಿಯೊಬ್ಬ ಯುವಜನತೆಯೂ ಕೂಡ ಧರ್ಮ ಮಾರ್ಗದಲ್ಲಿ ನಡೆದು ದೇಶದ ಆಸ್ತಿಯಾಗಲಿ ಎಂದು ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಲಲಿತಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ನುಡಿದರು.

Exellent Sarvadarma Arivu
ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗಾಂಧಿಜಯಂತಿಯ ಪ್ರಯುಕ್ತ `ಸರ್ವ ಧರ್ಮ ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ನಾರಾವಿ ಸೂರ್ಯನಾರಾಯಣ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ನಿತ್ಯಸಹಾಯ ಮಾತಾ ದೇವಾಲಯ, ಕಾರ್ಕಳದ ಯೋಗರಾಜ ಶಾಸ್ತ್ರಿ, ಗಂಟಾಲ್ಕಟ್ಟೆಯ ಧರ್ಮಗುರು ಫಾ. ಜೇಸುದಾಸ್ ಡಿ’ಕೋಸ್ತ, ಕೆ.ಜಿ.ಎನ್ ವಿದ್ಯಾಸಂಸ್ಥೆಯ ಮಹಮ್ಮದ್ ಹುಸೈನ್ ಅಹ್ಸಾನಿ ಅಲ್ ಧಾರ್ಮಿಕ ಸಂದೇಶ ನೀಡಿದರು.
ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಶರಾದ ಶ್ರೀ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವ ಧರ್ಮ ಸಮನ್ವಯವೇ ನಮ್ಮ ಜೀವನದ ಉಸಿರಾಗಿರಲಿ, ಎಲ್ಲರೂ ಪರಸ್ಪರ ಅರ್ಥೈಸಿಕೊಂಡು ಬಾಳೋಣ ಎಂದು ಹಾರೈಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *