ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ 14 ವಲಯಗಳು 2017-18 ನೇ ಸಾಲಿನಲ್ಲಿ ಮಾಡಿದ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ನೀಡುವ ಕಾರ್ಯಕ್ರಮ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು.
ಈ ಉತ್ತಮ ವಲಯ ಪ್ರಶಸ್ತಿಯನ್ನು ಬಂಟ್ವಾಳ ವಲಯ ಪಡೆದುಕೊಂಡಿತು. ಬಂಟ್ವಾಳ ವಲಯದ ಅಧ್ಯಕ್ಷರಾದ ಹರೀಶ್ ಮಾಣಿ ತಂಡ ನಡೆದ 28ನೇ ವಾರ್ಷಿಕ ಜಿಲ್ಲಾ ಮಹಾ ಸಭೆಯಲ್ಲಿ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ರಿಂದ ಪಡೆದುಕೊಂಡರು.

