ಕುಪ್ಪೆಪದವು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿಮಿತಿ ಮೀರಿದ್ದು, ಇಲ್ಲಿನ ಹಲವು ಮನೆಗಳಿಗಳಿಂದ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ.ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಇನ್ನೂ ಸೆರೆಹಿಡಿಯಲಾಗಿಲ್ಲ. ಆದ್ದರಿಂದಕಳ್ಳರನ್ನು ತಕ್ಷಣ ಬಂಧಿಸಿ ತಮ್ಮ ಊರನ್ನು ಕಳ್ಳರ ಹಾವಳಿಯಿಂದ ವಿಮುಕ್ತಗೊಳಿಸುವಂತೆಸೂರಲ್ಪಾಡಿ ನಿವಾಸಿ ಸಾದಿಕ್ ಅವರು ನಗರ ಪೊಲೀಸ್ ಆಯಕ್ತರು ಹಾಗೂ ಜಿಲ್ಲಾ ಉಸ್ತುವಾರಿಸಚಿವರಿಗೆ ದೂರು ನೀಡಿದ್ದಾರೆ.
ಗಂಜಿಮಠ ಸಮೀಪದ ಸೂರಲ್ಪಾಡಿ ನಿವಾಸಿ ಸಾದಿಕ್ ಎಂಬವರ ಮನೆಗೆ ಕಳೆದಸೆ.2ರಂದು ಕಳ್ಳರು ಬೆಳಗ್ಗಿನ ಜಾವ 4ರ ಸುಮಾರಿಗೆ ಮನೆಯ ಕಿಟಿಕಿಯ ಮೂಲಕ ಹಿಂಬಾಗಿಲಿನ ಚಿಲಕತೆರೆದು ಒಳನುಗ್ಗಿದ್ದರು. ಬಳಿಕ ಕಪಾಟಿನ ಬೀಗ ಮುರಿದು ಚಿನ್ನದ ಒಡವೆ ಸೇರಿ ಸುಮಾರು 33ಸಾವಿರ ರೂ. ಮೌಲ್ಯದ ಸೊತ್ತು, ಎಟಿಎಂ ಕಾರ್ಡ್‍ಗಳನ್ನು ಕಳವು ಮಾಡಿದ್ದರು. ಇದಕ್ಕೂ ಮುನ್ನಇಲ್ಲಿನ ಪರಿಸರದ ಅನೇಕ ಮನೆಗಳಿಗೆ ನುಗ್ಗಿ ಕಳವುಗೈದಿದ್ದರು ಎಂದುಮನವಿಯಲ್ಲಿಉಲ್ಲೇಖಿಸಲಾಗಿದೆ.
ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಪತ್ತೆ:
ಕಳ್ಳರ ಚಲನವಲನ ಸ್ಥಳೀಯ ಮಸೀದಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾವು ದೋಚಿದ ಎಟಿಎಂಕಾರ್ಡ್‍ಗಳನ್ನು ಬಳಸಿ ಕೈಕಂಬದ ಕೆನರಾ ಬ್ಯಾಂಕ್ ಹಾಗೂ ವಾಮಂಜೂರಿನ ಕೆನರಾ ಬ್ಯಾಂಕ್ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಯತ್ನಿಸಿದ್ದ ಸಿಸಿಟಿವಿ ಫುಟೇಜ್‍ಗಳನ್ನು ಬಜಪೆ ಪೊಲೀಸರುವಶಪಡಿಸಿದ್ದಾರೆ. ಫುಟೇಜ್‍ಗಳಲ್ಲಿ ಕಳ್ಳರ ಸ್ಪಷ್ಟ ಸುಳಿವಿದ್ದು, ತಕ್ಷಣ ಅವರನ್ನುಬಂಧಿಸಬೇಕು. ಅಲ್ಲದೆ ಸಿಸಿಟಿವಿ ಫುಟೇಜ್‍ಗಳನ್ನು ತನಗೆ ಒದಗಿಸಬೇಕೆಂದು ಮನವಿಯಲ್ಲಿಒತ್ತಾಯಿಸಿದ್ದಾರೆ. ಈ ಮುಂಚೆ ಅವರು ಬಜಪೆ ಠಾಣೆಗೆ ದೂರು ನೀಡಿದ್ದು, ಕಳ್ಳರ ಪತ್ತೆಯಾಗದಕಾರಣ ಕಮಿಷನರ್ ಹಾಗೂ ಸಚಿವರಿಗೆ ದೂರು ನೀಡಿದ್ದಾರೆ.

