ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿತಂಡ ಗುರುಪುರ ಕೈಕಂಬದ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾನುವಾರ ಅಭಿನಂದನಾ ಸಭೆಯು ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ನಡೆಯಿತು .ಯಕ್ಷಗುರು ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ ತಕಧಿಮಿ ತಂಡದ ವಿದ್ಯಾರ್ಥಿಗಳಿಗೆ ಸಭಾವೇದಿಕೆಯನ್ನು ನೀಡಿ ಪ್ರೋತ್ಸಾಹಿಸಿದ ಶ್ರೀರಾಮ ಸಭಾಂಗಣದ ಮಾಲಕರಾದ ಶ್ರೀ ಹರಿರಾವ್ ಸರೋಜಾ ರಾವ್ ದಂಪತಿಗಳನ್ನು ಅಭಿನಂದನಾ ಸಭೆಯಲ್ಲಿ ಸನ್ಮಾನಿಸಲಾಯಿತು. 30vpabhinandane

ವೇದಿಕೆಯಲ್ಲಿ ಉಮೇಶ್ ಭಂಡಾರಿ, ಜಯರಾಮ್ ಶೆಟ್ಟಿ, ರಕ್ಷಿತ್ ಶೆಟ್ಟಿ ಪಡ್ರೆ, ರಮೇಶ್ ಕುಲಶೇಖರ,ಸಂಚಾಲಕರಾದ ಪುಷ್ಪರಾಜ್ ಕೆ.,ಮಹೇಶ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ,  ಮಾಲತಿ ರಮೇಶ್ , ಸುಗುಣ ಶೆಟ್ಟಿ  ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ಸ್ವಾಗತಿಸಿ ನಿರೂಪಿಸಿದರು.ಪುಷ್ಪರಾಜ್ ಕೆ ವಂದಿಸಿದರು.

By suddi9

Leave a Reply

Your email address will not be published. Required fields are marked *