ಕೈಕಂಬ:ತನ್ನ ಮೂರು ತಿಂಗಳ ಹಸುಗೂಸು ಹಾಗೂ ಪತ್ನಿಯನ್ನು ಬಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಗಂಜಿಮಠದಲ್ಲಿ ಸಂಭವಿಸಿದೆ. ಗಂಜಿಮಠದ ಬಡಗುಳಿಪಾಡಿ ನಿವಾಸಿ ಜೆ.ಎಂ. ರೋಡ್ ನಿವಾಸಿ ಅಹಮ್ಮದ್ ಸಾಹೇಬ್ ಎಂಬವರ ಪುತ್ರ ಮಹಮ್ಮದ್ ಸಮೀರ್(35) ನಾಪತ್ತೆಯಾದ ವ್ಯಕ್ತಿ.
ಮಹಮ್ಮದ್ ಸಮೀರ್ ಸೆ.13ರಂದು ತನ್ನ ಪತ್ನಿ ಫಿರ್ದೌಸ್ ಹಾಗೂ ಮೂರು ತಿಂಗಳ ಹೆಣ್ಣು ಮಗುವನ್ನು ಕರೆದುಕೊಂಡು, ಬೆಂಗಳೂರಿನಲ್ಲಿ ಸಂದರ್ಶನ ಇದೆ ಎಂದು ತಿಳಿಸಿ ಮಂಗಳೂರು ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ತೆರಳಿದ್ದರು.
ಸೆ.15ರಂದು ತನ್ನ ತಾಯಿಗೆ ಕರೆ ಮಾಡಿ, ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದು, ಆ ಬಳಿಕ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ.
ಆದರೆ ಸೆ.18ರಂದು ಈತನ ಪತ್ನಿ ತನ್ನ ಮಗುವಿನೊಂದಿಗೆ ತನ್ನ ತಂದೆಯ ಮನೆಯಾದ ಕಾಪುವಿಗೆ ಬಂದಿದ್ದರು. ಈಕೆಯನ್ನು ವಿಚಾರಿಸಿದಾಗ, ಸಮೀರ್ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಹಾಗೂ ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ನಾಪತ್ತೆಯಾದ ಸಮೀಪರ್ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆ ಅಹಮ್ಮದ್ ಸಾಹೇಬ್ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
22ವಿಪ ನಾಪತ್ತೆ
