ಕೈಕಂಬ;ಚಾಲಕನ ನಿಯಂತ್ರಣ ಕಳೆದುಕೊಂಡ ಮಹೀಂದ್ರಾ ಕಾರೊಂದು ಕಮರಿಗೆ ಉರುಳಿ ನಜ್ಜುಗುಜ್ಜಾದ ಘಟನೆ ಎಡಪದವು ಸಮೀಪದ ರಾ.ಹೆದ್ದಾರಿಯ ತಿರುವಿನಲ್ಲಿ ಶುಕ್ರವಾರ ರಾತ್ರಿ 3ರ ಸುಮಾರಿಗೆ ನಡೆದಿದೆ. ಆದರೆ ಅದೃಷ್ಟವಶಾತ್ ಚಾಲಕ ಪವಾಡ ಸದೃಶ್ಯರೀತಿಯಲ್ಲಿ ಪಾರಾಗಿದ್ದಾರೆ.

ಮೂಡಬಿದ್ರೆಗೆಂದು ಸಂಚರಿಸುತ್ತಿದ್ದ ಮಹೀಂದ್ರಾ ಎಸ್ಯುವಿ ಕಾರ್ ಎಡದಪವು ಇಳಿಜಾರು ಪ್ರದೇಶದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಮರಿಗೆ ಉರುಳಿಬಿದ್ದಿದ್ದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕ ಪಾರಾಗಿದ್ದಾರೆ. ಉಳಿದಂತೆ ವಾಹನದಲ್ಲಿ ಇತರ ಪ್ರಯಾಣಿಕರಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಕಾರನ್ನು ಮೇಲೆತ್ತಲಾಗಿದೆ. ಈ ಭಾಗ ಅಪಾಯಕಾರಿ ತಿರುವಾಗಿದ್ದು, ಈ ಮುಂಚೆಯೂ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ಪ್ರಾಣ ಹಾನಿಯೂ ಉಂಟಾಗಿತ್ತು.
