ಮೂಡುಬಿದಿರೆ: ತೆಂಕುತಿಟ್ಟು ಯಕ್ಷಗಾನ ರಂಗದ ಹೆಸರಾಂತ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಪುರಸ್ಕಾರ ಹೊಂದಿದೆ. ಇದೇ ವೇಳೆಗೆ, ಕಳೆದ ಬಾರಿ ಬಲಿಪರು ಬರೆದ 14 ಪ್ರಸಂಗಗಳನ್ನು ಒಳಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟಿಸಿರುವ `ಜಯಲಕ್ಷ್ಮೀ’ ಕೃತಿಯು ಯಕ್ಷಗಾನ ಅಕಾಡೆಮಿಯು ನೀಡುವ ರೂ.25,000 ಮೊತ್ತದ ನಗದು ಪುರಸ್ಕಾರಕ್ಕೆ ಆಯ್ಕೆಯಾಗಿದೆ.

balipa

ಮೂಲ್ಕಿ, ಕೂಡ್ಲು, ಕುಂಡಾವು ಮೇಳಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಕಟೀಲು ಮೇಳದಲ್ಲಿ ಸುಮಾರು 40 ವರ್ಷಗಳಷ್ಟು ಸುದೀರ್ಘ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದವರು. ಸ್ವತ: ಪಡ್ರೆ ಜಟಾಧಾರಿ ಮೇಳವನ್ನು ನಡೆಸಿದ ಅನುಭವ ಹೊಂದಿರುವ ಇವರು ನೂರಾರು ಧ್ವನಿಸುರುಳಿ, ಸಿಡಿ ತಟ್ಟೆಗಳಲ್ಲಿ ಬಲಿಪರು ದಾಖಲಾಗಿದ್ದಾರೆ. ಅನೇಕ ಕಡೆಗಳಲ್ಲಿ ಅಪೂರ್ವ ರಾಗಗಳ ದಾಖಲೀಕರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಗಾನ ವೈಭವಗಳಲ್ಲಿ ಹಿರಿಯ ಕಿರಿಯ ಭಾಗವತರೊಂದಿಗೆ ಹಾಡಿದ್ದಾರೆ.

4 ದಶಕಗಳಿಂದ ಮೂಡುಬಿದಿರೆ ಬಳಿಯ ಮಾರೂರು ನೂಯಿ ಎಂಬಲ್ಲಿ ಕೃಷಿ ಸಂಸ್ಕøತಿಯೊಂದಿಗೆ ವಾಸವಾಗಿರುವ ಬಲಿಪರಿಗೆ 75 ವರ್ಷ ತುಂಬಿದ ಸಂದರ್ಭ ಅವರ ಅಭಿಮಾನಿಗಳು ಸೇರಿ ಅವರ ಮನೆಯ ಪಕ್ಕದಲ್ಲೇ `ಬಲಿಪ ಭವನ’ ನಿರ್ಮಿಸಿಕೊಟ್ಟಿರುವುದು ಯಕ್ಷಗಾನ ಕಲಾವಿದರೊಬ್ಬರಿಗೆ ಅವರ ಜೀವಮಾನದಲ್ಲೇ ಸಂದ ದೊಡ್ಡ ಅಭಿಮಾನದ ಕೊಡುಗೆ.

ಬಲಿಪ ಭಾಗವತರಿಗೆ ಪಾರ್ತಿ ಸುಬ್ಬ ಪ್ರಶಸ್ತಿ ಲಭಿಸಿರುವುದಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮೂಡುಬಿದಿರೆ `ಯಕ್ಷಸಂಗಮ’ದ ಸಂಚಾಲಕ ಎಂ.ಶಾಂತರಾಮ ಕುಡ್ವ, ಯಕ್ಷ ಮೇನಕಾ ಕಾರ್ಯಾಧ್ಯಕ್ಷ ನೆಲ್ಲಿಮಾರು ಸದಾಶಿವ ರಾವ್ ಮೊದಲಾದವರು ಅಭಿನಂದಿಸಿದ್ದಾರೆ.

By Suddi9

Leave a Reply

Your email address will not be published. Required fields are marked *