ಮೂಡುಬಿದಿರೆ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿಯಂತರ ದಿನಾಚರಣೆಯನ್ನು ಶನಿವಾರ ಆಯೋಜಿಸಲಾಗಿತ್ತು.

yenepoya (2)
ಆಳ್ವಾಸ್ ತಾಂತ್ರಿಕ ವಿದ್ಯಾಲಯದ ಡೀನ್ ಪ್ರೊ.ಪಿ.ರಾಮಕೃಷ್ಣ ಚಡಗ ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಡಾ.ರಾಧಾಕೃಷ್ಣರವರ ವೃತ್ತಿಪರತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅವರಿಬ್ಬರ ಜೀವನದ ಅನೇಕ ಸಂದೇಶಗಳನ್ನು ತಿಳಿಸಿದರು.

yenepoya (1)
ಪ್ರಾಂಶುಪಾಲ ಡಾ.ಆರ್.ಜಿ.ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, “ಉನ್ನತ ಮತ್ತು ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕ ಮತ್ತು ಅಭಿಯಂತರರ ಕೊಡುಗೆ ಅಪಾರವಾದದ್ದು” ಎಂದರು.
ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಎನ್. ಸ್ವಾಗತಿಸಿ, ಪ್ರೊ.ರವೀಂದ್ರ ಎನ್. ವಂದಿಸಿದರು.

By Suddi9

Leave a Reply

Your email address will not be published. Required fields are marked *