ಮೂಡುಬಿದಿರೆ: ಕಾಂತಾವರ ಕನ್ನಡಸಂಘವು ಪ್ರತಿ ವರ್ಷವು ಕರ್ನಾಟಕ ರಾಜ್ಯೋತ್ಸವ ದಿನದಂದು ನೀಡುತ್ತಾ ಬಂದಿರುವ ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿಗೆ ಡಾ. ಹರಿಕೃಷ್ಣ ಭರಣ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂತಾವರ ಕನ್ನಡಸಂಘದ ಅಧ್ಯಕ್ಷ ನಿರಂಜನ ಮೊಗಸಾಲೆ ತಿಳಿಸಿದ್ದಾರೆ.

Samskritika Ekikaran Award

ಪ್ರಶಸ್ತಿಯು ಹತ್ತು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಹೊಂದಿದ್ದು, ನವಂಬರ್ 1 ರ ಸಂಜೆ ಕಾಂತಾವರದ ‘ಕನ್ನಡಭವನ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

ಡಾ. ಹರಿಕೃಷ್ಣ ಭರಣ್ಯ
ಪುತ್ತೂರು ಪಾಣಾಜೆ ಮೂಲದವರಾದ ಡಾ. ಹರಿಕೃಷ್ಣ ಭಟ್ ಭರಣ್ಯ (1951) ನಮ್ಮ ನಡುವಿನ ಅಪರೂಪದ ವಿದ್ವಾಂಸರು. ‘ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ 1860 – 1920’ ಕುರಿತು ಅವರ ಪಿ.ಹೆಚ್ ಡಿ ಮಹಾಪ್ರಬಂಧ ಬರೆದಿದ್ದಾರೆ. ತಮಿಳುನಾಡಿನ ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಶೋಧನೆ, ವಿಮರ್ಶೆ ಅವರ ಆಸಕ್ತಿಯ ಕ್ಷೇತ್ರ. ಸೃಜನಶೀಲ ಕೃತಿರಚನೆಗಳನ್ನು ಮಾಡಿದ್ದಾರೆ. ನಾಲ್ಕಾರು ಕವನ ಸಂಗ್ರಹ, ಎರಡು ಕಾದಂಬರಿಗಳ ಜೊತೆಗೆ ಅವರು ಮೌಲಿಕ ಕೃತಿಗಳನ್ನೂ ಸಂಪಾದಿಸಿದ್ದಾರೆ. ತುಳುವಿನಲ್ಲೂ ಅವರ ಸಾಹಿತ್ಯ ಕೃಷಿ ನಡೆದಿವೆ. ಪ್ರತಿಷ್ಠಿತ ಮುಳಿಯ ತಿಮ್ಮಯ್ಯ ಪ್ರಶಸ್ತಿ, ಹವಿಗನ್ನಡ ಸಾಹಿತ್ಯಕ್ಕೆ ಮೀಸಲಾದ ಸೂರಿ ಪ್ರಶಸ್ತಿಗಳಿಂದ ಅವರು ಗೌರವಿಸಲ್ಪಟ್ಟಿದ್ದಾರೆ. ಪ್ರಥಮ ಹವಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತೂ ಅವರನ್ನು ಸನ್ಮಾನಿಸಿದೆ. ಅವರಿಗೆ ‘ಭರಣ್ಯ’ ಎಂಬ ಅಭಿನಂದನ ಗ್ರಂಥ ಸಮರ್ಪಿಸಲ್ಪಟ್ಟಿದೆ. ಮಲೆಯಾಳಂ ತಮಿಳು ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲೂ ಬರೆದಿರುವ ಡಾ. ಹರಿಕೃಷ್ಣರಿಗೆ ಯಕ್ಷಗಾನ ಮತ್ತು ಸಂಗೀತದಲ್ಲಿ ವಿಶೇಷ ಪ್ರೀತಿಯಿದ್ದು ಇದೀಗ ಅವರು ಹವಿಗನ್ನಡ ನಾಟಕಗಳ ಮಹಾಸಂಪುಟವನ್ನು ಸಂಪಾದಿಸಿ ಹೊರತರಲು ಸನ್ನದ್ಧರಾಗಿದ್ದಾರೆ.

By Suddi9

Leave a Reply

Your email address will not be published. Required fields are marked *