ಮೂಡುಬಿದಿರೆ: ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ (ರಿ) ಬೆಳುವಾಯಿ ಸಂಸ್ಥೆಯ 21 ನೇ ವರ್ಷದ ಕಾರ್ಯಕ್ರಮವು ಇದೇ ಬರುವ ಅಕ್ಟೋಬರ್ ತಿಂಗಳ ದಿನಾಂಕ 5/6/7 ರಂದು ಮೂಡಬಿದಿರೆಯಲ್ಲಿ ಮೂರು ದಿನಗಳ ಕಾಲಮಿತಿ ತುಳು ಸ್ಪರ್ಧಾ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಎಮ್. ದೇವಾನಂದ ಭಟ್ ತಿಳಿಸಿದ್ದಾರೆ.
ಇದು ಕಲಾವಲಯದಲ್ಲಿ ಆರೋಗ್ಯಪೂರ್ಣವಾದ ಸ್ಪರ್ಧೆ ಮತ್ತು ವೃತ್ತಿಪರ ಮೇಳಗಳು ಭವಿಷ್ಯತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಸದುದ್ದೇಶ ಮತ್ತು ಪ್ರಸಂಗ ಸಾಹಿತ್ಯ, ಭಾಷ ಸಾಹಿತ್ಯ ಸಂವರ್ಧನೆಗೆ ಪೂರಕವಾಗಿ ಉತ್ತಮ ಗುಣಮಟ್ಟದ ಕಲಾವಿದರ ಪ್ರತಿಭೆಯನ್ನು ಪರಿಚಯಿಸುವ ಉದ್ದೇಶ ಹೊಂದಿದ್ದು, ಈ ಕಲಾ ಪ್ರಸರಣದ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಈಗಾಗಲೇ ಸಾಮಾನ್ಯ ಹತ್ತು ಹನ್ನೆರಡು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು ಸಂಸ್ಥೆಯು ತೀರ್ಮಾನಿಸಿದಂತೆ ಮೊದಲು ಬಂದ 7 ತಂಡಗಳಿಗೆ ಮಾತ್ರವೇ ಭಾಗವಹಿಸಲು ಅವಕಾಶ. ಆದ್ದರಿಂದ ಈ ತಿಂಗಳ ತಾರೀಕು 10 ರ ಒಳಗೆ ನಮಗೆ ಎಲ್ಲಾ ಮೇಳಗಳ ವ್ಯವಸ್ಥಾಪಕರು ಅರ್ಜಿ ತುಂಬಿ ಕಳುಹಿಸಬೇಕಾಗಿ ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೋ: 9845644556 / 08258-276177

By Suddi9

Leave a Reply

Your email address will not be published. Required fields are marked *