ವಿಟ್ಲ: ರೋಟರಿ ಕ್ಲಬ್ ವತಿಯಿಂದ ಪುಣಚ ಗ್ರಾಮದ ದೇವಿನಗರದ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನೀಡಲಾಯಿತು.

ಈ ಸಂದರ್ಭದಲ್ಲಿ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಎಸ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಕವಿತಾ, ರೋಟರಿ ಕ್ಲಬ್ ಅಧ್ಯಕ್ಷ ಡಾ| ಚರಣ್ ಕಜೆ, ಕಾರ್ಯದರ್ಶಿ ಸುಚೇತನ್ ಜೈನ್, ನಿಕಟ ಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ, ಸದಸ್ಯರುಗಳಾದ ಭಸ್ಕರ ಶೆಟ್ಟಿ, ವಸಂತ ಶೆಟ್ಟಿ, ಡಾ| ವಿ ಕೆ ಹೆಗ್ಡೆ, ಮೋಹನ ಮೈರ, ಕೃಷ್ಣ ಭಟ್, ಕೋಶಾಧಿಕಾರಿ ಪಿ ಕೆ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷ ಜಯಂತ, ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.
