ಮೂಡಬಿದಿರೆ: ಪಕ್ಷಿಗಳ ಇಂಚರವನ್ನು ಕೇಳಿ ಖುಷಿ ಪಡಬೇಕೇ ವಿನಃ ಪಕ್ಷಿಗಳನ್ನು ಹಿಡಿದು ಪಂಜರದಲ್ಲಿ ಹಾಕಿ ಹಿಂಸೆ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಪಕ್ಷಿಸಂಕುಲಗಳ ಉಳಿವಿಗೆ ಎಳವೆಯ ಮನಸ್ಸು ಸಮೃದ್ಧವಾಗಲಿ ಈ ಮೂಲಕ ಪಕ್ಷಿ ಪ್ರಪಂಚ ಸಮೃದ್ಧವಾಗಲಿ ಎಂದು ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.

gubbachi goodu (2)
ದ.ಕ.ಜಿ.ಪಂ.ಸ.ಮಾ.ಹಿ.ಪ್ರಾ.ಶಾಲೆ ಜ್ಯೋತಿನಗರದಲ್ಲಿ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಇವರು ಮಾತನಾಡಿದರು.
ಪಕ್ಷಿಗಳಿಗೂ ನಮ್ಮಂತೆ ಬದುಕುವ ಹಕ್ಕು ಇದೆ. ಅವುಗಳಿಗೆ ತೊಂದರೆ ಮಾಡದೆ ಪಕ್ಷಿ ಪ್ರೇಮಿಗಳಾಗಬೇಕು. ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಪತ್ರಕರ್ತ ಹರೀಶ್. ಕೆ. ಆದೂರು ಶುಭ ಹಾರೈಸಿದರು.

gubbachi goodu (1)
ಗುಬ್ಬಚ್ಚಿಗೂಡಿನ ರಮ್ಯ ಮಕ್ಕಳಿಗೆ ವಿವಿಧ ಪಕ್ಷಿಗಳ ಇಂಚರವನ್ನು ಕೇಳಿಸಿ ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ವನಿತಾ ಸ್ವಾಗತಿಸಿ ನಿರೂಪಿಸಿದರು. ಸಹ ಶಿಕ್ಷಕಿಯರಾದ ವಿದ್ಯಾ ಮತ್ತು ಆಶಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಇಡುವ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

By Suddi9

Leave a Reply

Your email address will not be published. Required fields are marked *