ಉಡುಪಿ: ಜೇಸಿಐ ಪರ್ಕಳ ಇದರಆಶ್ರಯದಲ್ಲಿ ಜೇಸಿಸಪ್ತಾಹ ಸಾಥ್ ಸುರ್ ಇದರ ಉದ್ಘಾಟನಾ ಅಂಗವಾಗಿ ಪ್ರಸಾದ್ ನೇತ್ರಾಲಯ, ಲೋಂಬಾರ್ಡ್ ಮೆಮೋರಿಯಲ್‍ಆಸ್ಪತ್ರ(ಮಿಷನ್) ಮತ್ತು ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಕಾರದಲ್ಲಿ ಬೃಹತ್ ನೇತ್ರ ತಪಾಸಣಾ, ರಕ್ತದಾನ ಮತು ಆರೋಗ್ಯ ತಪಾಸಣಾ ಶಿಬಿರವು ಪರ್ಕಳ ಆಪೂರ್ವ ನರ್ಸಿಂಗ್‍ನಲ್ಲಿ ಸೆ.9 ನಡೆಯಿತು.

JCI udupi
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭಾ ಸದಸ್ಯೆ ಸುಮಿತ್ರಾ ನಾಯಕ್ ಮಾತನಾಡಿ, ಆರೋಗ್ಯವನ್ನು ನಾವು ನಿರ್ಲಕ್ಷ ವಹಿಸಿದರೆ ನಮಗೆ ಹಲವಾರು ರೋಗಗಳು ಬಂದು ನಮ್ಮದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ವೈದ್ಯರ ಮೂಲಕ ನಡೆಯುವಇಂತಹಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಕಳ ಜೇಸಿ ಅಧ್ಯಕ್ಷ ದೇವೇಂದ್ರ ನಾಯಕ್ ವಹಿಸಿದ್ದರು.
ಮಾಹೆ ಮಣಿಪಾಲದ ಫ್ಲಾವೀಯ ಕ್ಯಾಸ್ಟಿಲಿನೋ ಆರೋಗ್ಯದ ಕುರಿತು ಮಾಹಿತಿ ನೀಡಿದರು. ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲು ಮಾತನಾಡಿ, ಹೆಚ್ಚಿನ ಕಡೆಗಳಲ್ಲಿ ಆರೋಗ್ಯ ಶಿಬಿರದ ಕುರಿತು ತಪ್ಪು ಅಭಿಪ್ರಾಯವಿದೆ. ನಮ್ಮ ಆರೋಗ್ಯದ ಬಗ್ಗೆ ವೈದ್ಯರಿಂದ ಸಲಹೆ ಪಡೆದು ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಂಬಾರ್ಡ್ ಆಸ್ಪತ್ರೆಯ ವೈದ್ಯರಾದ ಡಾ||ಗಣೇಶ್‍ಕಾಮತ್, ಡಾ||ಲೀಲಾ ಥಾಮಸ್, ಡಾ||ನಾಗೇಶ್ ನಾಯಕ್, ಡಾ||ಫ್ಲಾಮಿನಾ, ಪ್ರಸಾದ್ ನೇತ್ರಾಲಯದ ಡಾ|| ನೀಲ್ ,ಸರ್ಕಾರಿ ವೈದ್ಯಾಧಿಕಾರಿ ಡಾ||ಸತ್ಯಶಂಕರ್‍ಎನ್,
ವಲಯಾಧಿಕಾರಿ ಆಶಾ,ಕಾರ್ಯದರ್ಶಿಜಶ್ವಂತ್ ಜೋಗಿ,ಇಂದಿರಾಶೆಟ್ಟಿ,ಸುಪ್ರಿಯಾ,ವಿನುತ ಶೆಟ್ಟಿಗಾರ್,ದಿನೇಶ್ ಶೆಟ್ಟಿ,ಮಹೇಶ್ ಪ್ರಭು ಉಪಸ್ಥಿತರಿದ್ದರು.
ಈ ಶಿಬಿರದ ಪ್ರಯೋಜನವನ್ನು ಸುಮಾರು 300 ಜನರು ಪಡೆದರು.

By suddi9

Leave a Reply

Your email address will not be published. Required fields are marked *