ಮೂಡುಬಿದಿರೆ: ಭಾರತದ ಸಂಸ್ಕøತಿಗೆ 5000 ವರ್ಷಕ್ಕಿಂತಲೂ ಹೆಚ್ಚಿನ ಭವ್ಯ ಇತಿಹಾಸ, ಪರಂಪರೆಯಿದೆ. ಇಡೀ ವಿಶ್ವಕ್ಕೆ ಗುರುವಾಗುವ ಎಲ್ಲಾ ಲಕ್ಷಣಗಳು ನಮ್ಮ ದೇಶದ ಪರಂಪರೆಗಿದೆ. ವಿಶ್ವ ಗುರುವಾಗುವ ಪರಂಪರಾಗತವಾದ ನೆಲದಲ್ಲಿ ನಾವು ಹುಟ್ಟಿ ಬೆಳೆಯುತ್ತಿದ್ದೇವೆ. ಅದಕ್ಕಾಗಿ ನಾವು ಹೆಮ್ಮೆಪಡಬೇಕು. 5000 ವರ್ಷಗಳಲ್ಲಿ ನಮ್ಮ ಹಿರಿಯರು ರೂಪಿಸಿದ ಸಂಸ್ಕøತಿಯನ್ನು ಉಳಿಸಿ ನಮ್ಮ ಕೈಗೆ ಒಪ್ಪಿಸಿದ್ದಾರೋ ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ಒಪ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ ಸಾಂಸ್ಕøತಿಕ ಪರಂಪರೆಯ ಮಹತ್ವವನ್ನು ಅರಿತು ಅದನ್ನು ಉಳಿಸಿ ಸಂರಕ್ಷಿಸುವ ಕೆಲಸಗಳು ಆಗಬೇಕು. ನಮ್ಮ ದೇಶದ ಸಂಸ್ಕøತಿ ಇಡೀ ವಿಶ್ವವೇ ತಲೆಬಾಗಿ ಗೌರವಿಸಲ್ಪಡುವ ಸ್ಥಾನದಲ್ಲಿದೆ. ಭಾರತದ ಎಲ್ಲಾ ಸ್ಥಳಗಳು, ಐತಿಹಾಸಿಕ ಕಟ್ಟಡಗಳು, ಪ್ರದೇಶಗಳು ಒಂದೊಂದು ಪರಂಪರೆಯನ್ನು ಹೊಂದಿದೆ. ಆದ್ದರಿಂದ ಅಖಂಡ ಭಾರತವನ್ನು ವಿಶ್ವಪಾರಂಪರಿಕ ತಾಣವೆಂದು ಕರೆದರೆ ಒಳ್ಳೆಯದು ಎಂದು ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು.

jain heritage club 1 (2)
ಇವರು ಜೈನ ಪ.ಪೂ.ಕಾಲೇಜಿನ ಹೆರಿಟೇಜ್ ಕ್ಲಬ್‍ನ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಮಧುಕರ ಸಾಲಿನ್ಸ್ ಅಧ್ಯಕ್ಷತೆ ವಹಿಸಿ, ಪರಂಪರೆಯ ಮಹತ್ವವನ್ನು ಅರಿತು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಪ್ರಯತ್ನಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

jain heritage club 1 (1)
ಕಾರ್ಯಕ್ರಮದಲ್ಲಿ ಹೆರಿಟೇಜ್ ಕ್ಲಬ್‍ನ ಸಂಯೋಜಕ ಕನ್ನಡ ಭಾಷಾ ಉಪನ್ಯಾಸಕ ಕೆ.ಉದಯಕುಮಾರ್ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಯೋಗೇಶ್ ಡಿ. ಕಾರ್ಯಕ್ರಮ ನಿರೂಪಿಸಿದರು. ಕ್ಲಬ್‍ನ ಸದಸ್ಯೆ ಪ್ರಕೃತಿ ವಂದಿಸಿದರು.

By suddi9

Leave a Reply

Your email address will not be published. Required fields are marked *