ಮೂಡುಬಿದಿರೆ: ಮೋಂತಿ ಹಬ್ಬವು ಕರಾವಳಿ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚು ಪ್ರಸ್ತುತಗೊಂಡಿದ್ದು, ಇದೊಂದು ಕುಟುಂಬದ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಇಂದಿನ ದಿನಗಳಲ್ಲಿ ಜನರಿಗೆ ಸಮಯದ ಅಭಾವದಿಂದಾಗಿ ತಮ್ಮ ಕುಟುಂಬ ಹಾಗೂ ಬಂದು ಬಳಗದವರಿಗೆ ಸಮಯ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ತೆನೆ ಹಬ್ಬವು ಕೌಟುಂಬಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವಲ್ಲಿ ಸಹಕಾರಿಯಾಗಿದೆ ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‍ನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ನುಡಿದರು.

shirthady thene habba

ಸೆ.8ರ ಶನಿವಾರ ಶಿರ್ತಾಡಿ ಚರ್ಚ್‍ನ ಆವರಣದಿಂದ ಇಲ್ಲಿನ ಬಸ್ಸು ನಿಲ್ದಾಣದವರೆಗೆ ಮೋಂತಿಹಬ್ಬ ಆಚರಣೆಯ ಸಲುವಾಗಿ ನಡೆದ ಧಾರ್ಮಿಕ ಮೆರವಣಿಗೆಯ ಸಮಾರೋಪದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮೋಂತಿ ಹಬ್ಬದ ಪ್ರಯುಕ್ತ ಚರ್ಚ್‍ಗೆ ಕ್ರೈಸ್ತ ಧರ್ಮೀಯ ಮಕ್ಕಳು ಹೂಗಳೊಂದಿಗೆ ಆಗಮಿಸಿ ಮೇರಿಮಾತೆಯ ಮೂರ್ತಿಗೆ ಪುಷ್ಫಾರ್ಚನೆಗೈದರು. ಎಲ್ಲಾ ಭಕ್ತರಿಗೂ ಚರ್ಚ್‍ನ ವತಿಯಿಂದ ಕಬ್ಬನ್ನು ಪ್ರಸಾದರೂಪವಾಗಿ ನೀಡಲಾಯಿತು. ಹೂವಿನಿಂದ ಅಲಂಕೃತಗೊಂಡ ಕ್ರೈಸ್ತ ಧರ್ಮೀಯ ಬಾಂಧವರ ಎಲ್ಲಾ ವಾಹನಗಳನ್ನು ಚರ್ಚ್‍ನ ಆವರಣದಲ್ಲಿ ನಿಲ್ಲಿಸಿ ಧರ್ಮಗುರುಗಳಿಂದ ಆಶೀರ್ವಾದ ಕಾರ್ಯನಡೆಯಿತು.
ಈ ಸಂದರ್ಭದಲ್ಲಿ ಫಾ.ದೀಪಕ್, ಧಾರ್ಮಿಕ ಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ, ಜೊಯೆಲ್ ಸಿಕ್ವೇರಾ, ಪ್ರಸಾದ್ ರೊಡ್ರಿಗಸ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *