ಬಂಟ್ವಾಳ: ಹೈನುಗಾರಿಕೆ ಜೀವನದ ಒಂದು ಭಾಗವಾಗಿ ಬೆಳೆಯಬೇಕು, ಅದಕ್ಕೆ ಪೂರಕವಾದ ವಾತಾವರಣ ವನ್ನು ಒಕ್ಕೂಟ ದ ಮೂಲಕ ಆಗಬೇಕಾಗಿದೆ, ಹೈನುಗಾರಿಕೆ ಸಹಕಾರಿ ಸಂಘಗಳ ಮೂಲಕ ಪರಿವರ್ತನೆ ಹೊಂದುತ್ತಿವೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.

kshira sagara (1)

ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘ.(ನಿ.) ಇದರ ವಿನೂತನ ವಿಸ್ತೃತ ಕಟ್ಟಡ ‘ ಕ್ಷೀರ ಸಾಗರದ ಉದ್ಘಾಟನಾ ಮತ್ತು ಸಿ.ಸಿ.ಟಿವಿ ಉದ್ಘಾಟನೆ ಮಾಡಿ ಮಾತನಾಡಿದರು. ಹಾಲು ಉತ್ಪಾದಕರ ಒಕ್ಕೂಟ ದ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಸಂಸ್ಕೃತಿಯ ಜೊತೆ ಕೃಷಿಯೊಂದಿಗೆ ಹೈನುಗಾರಿಕೆ ಬೆಳೆದು ಬಂದಿದೆ. ಹೈನುಗಾರಿಕೆ ಮಾಡಲು ಕೇಂದ್ರ ಸರಕಾರ ವಿಪುಲವಾಗಿ ಅವಕಾಶ ಪ್ರೇರಣೆ ನೀಡಿದೆ. ಇತರ ಒಕ್ಕೂಟ ಗಳಿಗೆ ವಗ್ಗ ದ ಹಾಲು ಉತ್ಪಾದತಕರ ಒಕ್ಕೂಟ ಮಾದರಿಯಾಗಿದೆ ಎಂದು ಅವರು ಹೇಳಿದರು.

kshira sagara (4)

ಸಭಾ ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯಕ್ ಉದ್ಘಾಟನೆಯನ್ನು ಬಳಿಕ ಮಾತನಾಡಿ, ರಾಜ್ಯದಲ್ಲಿ ಅತ್ಯುತ್ತಮ ಲಾಭದಾಯಕ ಒಕ್ಕೂಟವಾಗಿ ನಮ್ಮ ಜಿಲ್ಲೆಯ ಒಕ್ಕೂಟ ಬೆಳೆದಿರುವುದು ಶ್ಲಾಘನೀಯ. ಹೈನುಗಾರಿಕೆ ಮತ್ತು ಕ್ರಷಿ ಒಂದೇ ನಾಣ್ಯಗಳ ಎರಡು ಮುಖ ಇದ್ದಂತೆ. ಹಾಗಾಗಿ ಹೈನುಗಾರಿಕೆಯ ಜೊತೆಯಲ್ಲಿ ಇತರ ಮಿಶ್ರ ಬೆಳೆಗಳನ್ನು ಬೆಳೆಸುವ ಮನಸ್ಥಿತಿ ಯನ್ನು ರೂಡಿಮಾಡಿಕೊಂಡರೆ ಉತ್ತಮ. ರೈತರು ಹೈನುಗಾರಿಕೆಯಿಂದ ಆರ್ಥಿಕ ವಾಗಿ ಸಬಲರಾಗುವುದರ ಜೊತೆಗೆ ಭೂಮಿಯನ್ನು ಫಲವತ್ತಾಗಿ ಮಾಡಲು ಸಾಧ್ಯವಾಗುತ್ತದೆ. ರೈತರಿಂದ ಒಕ್ಕೂಟ ಬೆಳೆಯಲು ಸಾಧ್ಯ, ಒಕ್ಕೂಟ ದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಆಧುನಿಕತೆಯತ್ತ ಹೊಸ ಪ್ರಯೋಗ ಗಳ ಜೊತೆ ಸಾಗಿದಾಗ ಲಾಭ ಪಡೆಯುವುದು ಎಂದು ಹೇಳಿದರು.
ಕಾರ್ಯಕ್ರಮ ದ ಅದ್ಯಕ್ಷ ತೆಯನ್ನು ವಗ್ಗ ಹಾಲು ಉತ್ಪಾದಕ ರ ಸಂಘದ ಅದ್ಯಕ್ಷ ಟಿ.ವಾಸುದೇವ ಗೌಡ ವಹಿಸಿದ್ದರು.

kshira sagara (2)

ನೂತನ ವಿಸ್ತೃತ ಕಟ್ಟಡ ‘ ಕ್ಷೀರ ಸಾಗರ’ ವನ್ನು ಉದ್ಘಾಟಿಸಿ ಮಾತನಾಡಿದ ಹಾಲು ಉತ್ಪಾದಕ ರ ಜಿಲ್ಲಾದ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಆ ಮೂಲಕ ಒಕ್ಕೂಟ ವನ್ನುಬಲಪಡಿಸಿ ಎಂದು ಕಿವಿ ಮಾತು ಹೇಳಿದರು.

kshira sagara (3)
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಮೂಲ್ ಸಂಸ್ಥೆ ಹಾಲು ಉತ್ಪಾದನೆಯ ವಿಷಯದಲ್ಲಿ ಕ್ರಾಂತಿಯನ್ನು ಮಾಡಿದೆ. ಹಾಲು ಒಕ್ಕೂಟ ರೈತರಿಗೆ ಶಕ್ತಿಯನ್ನು ನೀಡಿದೆ. ಹಾಲು ಉತ್ಪಾದನೆ ರೈತನ ಜೀವನದಲ್ಲಿ ಆರ್ಥಿಕ ಬದಲಾವಣೆಯನ್ನು ತಂದಿದೆ. ಉತ್ತಮ ಹಾಲು ಉತ್ಪಾದಕ ರ ಪೈಕಿ ದ.ಕ.ಜಿಲ್ಲೆಯು ಒಂದು ಎಂಬುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರುಗಳಾದ ಡಾ! ಕೆ. ಎಂ. ಕ್ರಷ್ಣ ಭಟ್, ಕೆ.ಪಿ.ಸುಚರಿತ ಶೆಟ್ಟಿ,ವ್ಯವಸ್ಥಾಪಕ ನಿರ್ದೇಶಕ
ಡಾ! ಬಿ.ವಿ.ಸತ್ಯನಾರಾಯಣ , ಜಿಲ್ಲಾ ವ್ಯವಸ್ಥಾಪಕ ಡಾ! ನಿತ್ಯಾನಂದ ಭಕ್ತ, ಕಾರಿಂಜೇಶ್ವರ ದೇವಸ್ಥಾನ ದ ಸಮಿತಿಯ ಅದ್ಯಕ್ಷ ಜಿನರಾಜ ಆರಿಗ, ಜಿ.ಪಂ.ಸದಸ್ಯ ರುಗಳಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಸ್ಥಾಯಿಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ಜಿಲ್ಲಾ ಒಕ್ಕೂಟ ದ ಉಪವ್ಯವಸ್ಥಾಪಕರಾದ ಟಿ.ವಿ.ಶ್ರೀ ನಿವಾಸ, ಡಾ ! ಮಧುಸೂದನ್ ಕಾಮತ್ ಹಾಲು ಉತ್ಪಾದಕ ರ ಸಂಘದ ಉಪಾಧ್ಯಕ್ಷ ಜೆಫ್ರಿ ರೋಡ್ರಿಗಸ್, ವಗ್ಗ ಒಕ್ಕೂಟದ ಮುಖ್ಯಕಾರ್ಯನಿರ್ವಣಾಧಿಕಾರಿ ಇಸಾಕ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನನು ಕಾವಳಪಡೂರು ಗ್ರಾ.ಪಂ.ಅದ್ಯಕ್ಷ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ , ಹಾಲು ಒಕ್ಕೂಟ ದ ವಿಸ್ತರಣಾಧಿಕಾರಿ ಜಗದೀಶ್ ನಿರೂಪಿಸಿದರು. , ಸಂಘದ ಸದಸ್ಯ ವಿನ್ಸೆಂಟ್ ಬೆನ್ನಿಸ್ ವಂದಿಸಿದರು.

By suddi9

Leave a Reply

Your email address will not be published. Required fields are marked *