ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತವೃಂದಬಟ್ಟಾಜೆ ಇದರ 12ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸೋಮವಾರ ಕೊಪ್ಪಲ ಉಮಾನಾಥ ಸಪಲ್ಯ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕೊಳಕೆ ದರ್ಖಾಸು ಕೃಷ್ಣಪ್ಪ ಡ್ರೈವರ್ ವಹಿಸಿದ್ದರು. ಕೂರಿಯಾಳ ಗ್ರಾ.ಪಂ.ಸದಸ್ಯ ಸುಧಾಕರ ಶೆಟ್ಟಿ ಭಾಗಂತ್ರಬೈಲು, ಚರಣ್ ಬಟ್ಟಾಜೆ,ಚಿದಾನಂದ ಬಟ್ಟಾಜೆ ಮತ್ತು ರಮೇಶ್‍ಪೂಜಾರಿ ಬಟ್ಟಾಜೆ ಉಪಸ್ಥಿತರಿದ್ದರು.


