ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಇದರ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ವನ್ನು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಉದ್ಘಾಟಿಸಿದರು.

vidyarthi sanga (2)
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಯಕತ್ವ ಗುಣವನ್ನು ಮತ್ತು ಶಿಸ್ತಿನ ಜೀವನ ಕ್ಕಾಗಿ ವಿದ್ಯಾರ್ಥಿ ಸಂಘ ಸಹಾಯಕ ವಾಗುತ್ತದೆ. ಎಲ್ಲಾ ಮಕ್ಕಳ ಜೊತೆ ಸೇರಿಕೊಂಡು ಮಕ್ಕಳಿಗೆ ಜೀವನ ಸ್ಥೈರ್ಯ ಕೊಡುವ ಕೆಲಸ ಮಾಡಬೇಕು. ವಿದ್ಯಾರ್ಥಿ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಕಾಣು ಸಿಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ವಿದ್ಯಾರ್ಥಿ ಗಳಲ್ಲಿ ಉತ್ತಮ ಕನಸುಗಳು ಬೇಕಾಗಿದೆ. ಜೀವನದಲ್ಲಿ ಉತ್ತಮ ಸಂಸ್ಕಾರದ ಮೂಲಕ ಸ್ಪಷ್ಟ ವಾದ ಗುರಿಯ ಮೂಲಕ ಮುಂದುವರಿಯರಿ ಎಂದು ಹೇಳಿದರು.
ಜಗತ್ತು ಇಂದು ಸ್ಪರ್ದಾತ್ಮಕವಾಗಿ ಬೆಳೆಯುತ್ತಿದೆ ಹಾಗಾಗಿ ವಿದ್ಯಾರ್ಥಿ ಗಳು ವ್ಯವಸ್ಥೆ ಯನ್ನು ಸದುಪಯೋಗ ಪಡಿಸಿಕೊಂಡು ಹಿರಿಯ ರ ಮಾರ್ಗದರ್ಶನ ಪಡೆದು ಬೆಳೆಯಲು ಪ್ರಯತ್ನಿಸಬೇಕು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಅದನ್ನು ರೂಪಿಸುವ ಕೆಲಸ ವಿದ್ಯಾರ್ಥಿ ದೆಸೆಯಿಂದಲೇ ಆಗಬೇಕಾಗಿದೆ. ವಿದ್ಯಾರ್ಥಿ ಗಳ ಸಂಘದ ಮೂಲಕ ಮಾಡಬೇಕಾದ ಕರ್ತವ್ಯ ಗಳ ಬಗ್ಗೆ ತಿಳಿಸಿದರು. ರಾಜಕೀಯ ವ್ರತ್ತಿ ಎಂದು ಕಾಣದೆ ರಾಜಕೀಯ ಸೇವೆ ಎಂದು ನೋಡಿಕೊಂಡು ಹೋದಾಗ ಅದರಿಂದ ಸಾರ್ವಜನಿಕ ವಾಗಿ ಸೇವೆ ನೀಡಲು ಸಹಕಾರಿಯಾಗುತ್ತದೆ
ಬಳಿಕ ನೂತನ ಶಾಸಕರನ್ನು ಗೌರವಿಸಲಾಯಿತು.

vidyarthi sanga (1)
ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದ್ಯಕ್ಷ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಅದ್ಯಕ್ಷ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್, ಪ್ರೌಢ ಶಾಲಾ ವಿಭಾಗದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಭಟ್, ಸಮಿತಿಯ ಸದಸ್ಯ ನೋಣಯ್ಯ ಶೆಟ್ಟಿ ಗಾರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸ ಕ ಶ್ರೀ ನಿವಾಸ ನಾಯ್ಕ್ ಸ್ವಾಗತಿಸಿದರು, ವಿದ್ಯಾರ್ಥಿ ಸಂಘದ ನಾಯಕ ಸುಭಾಷ್ ಬಂಗೇರ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *