ಮೂಡುಬಿದಿರೆ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೂಡುಬಿದಿರೆ ದಿಗಂಬರ ಜೈನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ವಿಜೇತರಾಗಿದ್ದಾರೆ.
7ನೇ ತರಗತಿಯ ವಿದ್ಯಾರ್ಥಿಯಾದ ಶ್ರೀಶ ಭಟ್ ಹಿರಿಯ ವಿಭಾಗದ ಸಂಸ್ಕøತ ಕಂಠಪಾಠ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಆಶುಭಾಷಣದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾನೆ. ಇವನು ಲಕ್ಷ್ಮೀನಾರಾಯಣ ಭಟ್ ಮತ್ತು ಸುಮನಾ ಭಟ್‍ರ ಪುತ್ರನಾಗಿರುತ್ತಾನೆ.

ಹಿರಿಯ ವಿಭಾಗದ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯಾದ ಪೂಜಾ ಎಸ್. ಆಚಾರ್ಯ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಈಕೆ ಶಿವಾನಂದ ಆಚಾರ್ಯ ಮತ್ತು ಶೋಭಾರವರ ಪುತ್ರಿಯಾಗಿರುತ್ತಾಳೆ.

7 ನೇ ತರಗತಿ ವಿದ್ಯಾರ್ಥಿಯಾದ ರಶಿಕೇಶ್ ಹಿರಿಯ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಈತ ರಾಜೇಶ್ ಗೌಡ ಮತ್ತು ಚಂದ್ರಾವತಿರವರ ಪುತ್ರನಾಗಿರುತ್ತಾನೆ.

7ನೇ ತರಗತಿಯ ವಿದ್ಯಾರ್ಥಿಯಾದ ಅಮೃತ್ ಹಿರಿಯ ವಿಭಾಗದ ಯಕ್ಷಗಾನ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈತ ರತ್ನಾಕರ ಮತ್ತು ಸುಜಾತರವರ ಪುತ್ರನಾಗಿರುತ್ತಾನೆ.

ಕಿರಿಯ ವಿಭಾಗದ ಉರ್ದುಕಂಠಪಾಠ ಸ್ಪರ್ಧೆಯಲ್ಲಿ 4ನೇ ತರಗತಿಯ ಶೈರಾ ರಿತಾಬ್ ದ್ವಿತೀಯ ಸ್ಥಾನವನ್ನು ಪಡೆದು , ಹಿರಿಯ ವಿಭಾಗದ ದೇಶಭಕ್ತಿ ತಂಡವು ತೃತೀಯ ಸ್ಥಾನವನ್ನು ಪಡೆದಿರುತ್ತದೆ.
