ಬಂಟ್ವಾಳ: ಅಡಿಕೆ ಬೆಳೆಗಾರರ ಒಕ್ಕೂಟ ಹಾಗೂ ರೈತ ಸಂಘ , ಹಸಿರು ಸೇನೆ ಇವರ ಸಂಯುಕ್ತ ಆಶ್ರಯದಲ್ಲಿ ಬಿಸಿರೋಡು ತಾಲೂಕು ಕಚೇರಿಯ ಮುಂಭಾಗದಲ್ಲಿ ಸೆ. 4 ರಂದು ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಅಡಿಕೆ ಕೊಳೆರೋಗದಿಂದ ಕಂಗಾಲಾದ ತಾಲೂಕಿನ ರೈತರಿಗೆ ಸೂಕ್ತ ವಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ , ಕೊಳೆರೋಗದಿಂದ ಬಿದ್ದಿರುವ ಅಡಿಕೆಗಳನ್ನು ತಾಲೂಕು ತಹಶಿಲ್ದಾರ ರ ಕಚೇರಿಯ ಮುಂಭಾಗದಲ್ಲಿ ರಾಶಿ ಹಾಕಿ ವಿನೂತನ ಶೈಲಿಯ ಲ್ಲಿ ಪ್ರತಿಭಟನೆಯನ್ನು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ
ನಡೆಸಲಾಗುವುದು , ಈ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ,
ಈ ಪ್ರತಿಭಟನೆಯಲ್ಲಿ ತಾಲೂಕಿನ ಹೆಚ್ಚಿನ ರೈತರು ಭಾಗವಹಿಸುವಂತೆ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು , ಜಿಲ್ಲಾದ್ಯಕ್ಷ ಶ್ರೀಧರ ಶೆಟ್ಟಿ ಬೈಲು ಗುತ್ತು , ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಬ್ರಮಣ್ಯ ಭಟ್ , ಒಕ್ಕೂಟ ಸದಸ್ಯ ಸಂಜೀವ ಪೂಜಾರಿ ಪಂಜಿಕಲ್ಲು ಪತ್ರಿಕಾ ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *