ಪೊಳಲಿ:ಬಂಟ್ವಾಳ ತಾಲೂಕಿನಬಡಗಬೆಳ್ಳೂರಿನಲ್ಲಿ ಇತ್ತೀಚೆಗೆ ರಚನೆಗೊಂಡ `ಹಸಿರು ಪ್ರಕೃತಿ’ ಎಂಬ ನಾಮಾಂಕಿತದೊಂದಿಗೆ ಹುಟ್ಟಿಕೊಂಡ ಸಂಘಟನೆಯ ನೇತೃತ್ವದಲ್ಲಿ ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಹಡೀಲು ಬಿದ್ದಿರುವ ಮೂರೂವರೆ ಎಕ್ರೆ ಭತ್ತದ ಗದ್ದೆಯಲ್ಲಿ (ಐದು ಮುಡಿ) ನಾಟಿ ನೆಡುವ ಕಾರ್ಯಕ್ರಮವು ಶುಕ್ರವಾರ ನಡೆಯಿತು.ಹಡೀಲು ಬಿದ್ದ ಗದ್ದೆಗಳನ್ನು ಸಮತೋಳನದಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿ ಶ್ರೀಪದ್ಧತಿಯಂತೆ ನೇಜಿ ನಾಟಿ ಮಾಡಿದ 17 ದಿನದಲ್ಲಿ ನೇಜಿ ತೆಗೆದು ನಾಟಿ ಮಾಡಲಾಯಿತು.DSC_7633
ಬೆಳಿಗ್ಗೆ ನಾಟಿ ಮಾಡುವ ಮೊದಲು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ದೀಪ ಬೆಳಗಿಸಿ ನಾಟಿ ನೆಡುವ ಮೂಲಕ ಚಾಲನೆ ನೀಡಿದರು. ಹಡೀಲು ಬಿದ್ದ ಗದ್ದೆಗಳನ್ನು ವರಕೋಡಿ ಮಹಬಲ ಶೆಟ್ಟಿ,ಮಂಜುಳಾ ರಮೇಶ್ ಶೆಟ್ಟಿ ಮಜ್ಜಿಬೈಲ್, ನಾರಾಯಣ ಪೂಜಾರಿ ದೂಪೆಮಾರ್ ನೀಡಿ ನಾಟಿ ನೆಡುವ ಕಾರ್ಯಕ್ರಮದಲ್ಲಿ ಬಾಗಿಯಾಗಿ ಸಹಕರಿಸಿದರು.
ಹಸಿರು ಪ್ರಕೃತಿಯ ಸಂಘದೊಂದಿಗೆ ವಿಜಯ ಗ್ರಾಮೀಣ ಪ್ರತಿಷ್ಠಾನ ಪೊಳಲಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾಕರ್ತರು,ಎಸ್.ಪಿ.ವೈ.ಎಸ್.ಎಸ್ ಪೊಳಲಿ ಘಟಕದ ಯೋಗ ಬಂಧುಗಳು, ದಿಶಾಟ್ರಸ್ಟ್ ಸಂಸ್ಥೆಯ ಸದಸ್ಯರು, ಸಾಥ್ ನೀಡಿದರು.ಅಲ್ಲದೆ ಬಡಗಬೆಳ್ಳೂರು ಶಾಲಾ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ನಾಟಿ ನೆಡಲು ಸಹಕರಿಸಿದರು. ಸ್ಥಳೀಯರ ಸಹಿತ ಸುಮಾರು 140 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಯಶಸ್ವಿಗೊಳಿಸಿದರು31-3
31-0003203ಶ್ರೀ ಆದಿಶಕ್ತಿ ದೇವಸ್ಥಾನದ ಸಂದೀಪ್ ಬೆಳ್ಳೂರು, ಲತೀಶ್ ಬೆಳ್ಳೂರು, ರಮೇಶ್ ಪೂಜಾರಿ ಬಟ್ಟಾಜೆ, ನಿರಂಜನದಾಸ್, ಅನಂತರಾಮ ಹೇರಳ,ಕೃಷ್ಣಪ್ರಸಾದ್, ಸತೀಶ್ಚಂದ್ರ ಭಂಡಾರಿ, ಸೋಮಶೇಖರ ಪೊಳಲಿ, ಕೇಶವ, ಪ್ರೇಮನಾಥ ಪೊಳಲಿ, ಉಮೇಶ ಶೆಟ್ಟಿ ಪರಿಮೊಗರು, ಬೆಳ್ಳೂರುಗುತ್ತು ಕೃಷ್ಣಪ್ರಸಾದ್ ರೈ,  ಚಂದ್ರಶೇಖರ ರಾವ್ ಪುಂಚಮೆ,  ನಾರಾಯಣ ಕುಲಾಲ್ ಬೂನ್ಯ ,ದಿನೇಶ್ ಪರಿಮೊಗರು,ಪ್ರಸನ್ನ, ರವಿ, ಶಶಿಕಿರಣ್, ದೊಡ್ಡಯ್ಯ ಕಾಜಿಲ,ರೂಪ ನಾರಾಯಣ,  ಭಾರತಿ ನಾಗೇಶ್, ವೀಣಾ, ವಿಶ್ಮ ಪೊಳಲಿ, ರೇಖಾಪುಂಚಮೆ, ಲೀಲಾ ಕುಪ್ಪೆಪದವು ಹಾಗೂ ಹಲವು ಸ್ವಯಂಪ್ರೇರಿತ ಕಾರ್ಯಕರ್ತರು ಸೇವಾ ಭಾವನೆಯಿಂದ ಭತ್ತ ನಾಟಿ ಮಾಡಿದರು.31-0202

00010

31-000110

31-010

31-6ಹಸಿರು ಪ್ರಕೃತಿಯ ಉದ್ಧೇಶ

ಕೃಷಿ ಭತ್ತದ ನಾಟಿ ಬೆಳೆದು ಭತ್ತದ ಬೈಹುಲ್ಲನ್ನು ಗೋಶಾಲೆಗಳಿಗೆ ನೀಡುವುದು. ಪ್ರಾಯೋಗಿಕ ನೆಲೆಯಲ್ಲಿ ಕಂಡು ಬರುವ ಫಲಿತಾಂಶ ಆಧರಿಸಿ ಮುಂದಿನ ದಿನಗಳಲ್ಲಿ ಸುತ್ತಲ ಪ್ರದೇಶದಲ್ಲಿ ಸಮಿತಿಗೆ ಒದಗಿಸಬಹುದಾದ ಹಡೀಲು ಭೂಮಿಯಲ್ಲಿ ಕೃಷಿ ಮಾಡಲು ಚಿಂತನೆ ನಡೆಸಲಾಗಿದೆ.ಎಂದು ಹಸಿರು ಪ್ರಕೃತಿ ಸಂಘಟನೆ ವಕ್ತಾರರು ತಿಳಿಸಿದರು.

0-1

 

 

31-0808

 

 

 

310000

 

 

 

DSC_7675

 

0-2

By suddi9

Leave a Reply

Your email address will not be published. Required fields are marked *