ಮೂಡುಬಿದಿರೆ: ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ಮಂಗಳೂರು ಶಾಖೆಯು ಮಲ್ಲಿಕಟ್ಟೆಯ ಸಿಟಿ ಟ್ರೇಡ್ ಸೆಂಟರ್ ನ ಮಳಿಗೆಯಿಂದ ಕರಂಗಲ್ಪಾಡಿ ರಸ್ತೆಯಲ್ಲಿರುವ ರಾಧಾ ಮೆಡಿಕಲ್ಸ್ ಕೆಳಗಡೆ ,ಬ್ರಿಗೇಡ್ ಪ್ಲಾಸಾ ವಾಣಿಜ್ಯ ಮಳಿಗೆಗೆ ಸ್ಥಳಾಂತರಗೊಂಡಿದ್ದು, ಶ್ರೀ ದೇವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.

ಸೌಹಾರ್ದ ಸಹಕಾರಿ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು ಈ ನಿಟ್ಟಿನಲ್ಲಿ ಶ್ರೀ ಸಿಂಚನ ಸೌಹಾರ್ದ ಸಹಕಾರಿಯೂ ಕಳೆದ 5 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಲಿ ನ ಅಧ್ಯಕ್ಷ ಮೋಹನ ಪ್ರಭು ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಹಾರ್ದ ಸೊಸೈಟಿ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಸಿಂಚನದಲ್ಲಿ ಆರಂಭಗೊಂಡ ಮೊಬೈಲ್ ಆ್ಯಪ್ ಅನ್ನು ಮಂಗಳೂರಿನ ಲೆಕ್ಕ ಪರಿಶೋಧಕ ಎಚ್.ಎಸ್ ನಾಯಕ್ ಲೋಕಾರ್ಪಣೆಗೊಳಿಸಿದರು. ಶಾಖೆಯ ಭದ್ರತಾ ಕೊಠಡಿಯನ್ನು ಡಾ.ವಿಷ್ಣುಪ್ರಭುರ ಉದ್ಗಾಟಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಹಿರಿಯ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಂಗೇರ್, ಜಿನರಾಜಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನಿರ್ದೇಶಕ ಗೋಪಾಲಕೃಷ್ಣ.ಕೆ ಯವರು ಪ್ರಾಸ್ತಾವಿಕವಾಗಿ ಮಾತಾಡಿದರು.
ಶ್ರೀ ಸಿಂಚನ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಎಂ.ಶೆಟ್ಟಿ, ಮಂಗಳೂರು ಶಾಖಾ ಪ್ರಬಂಧಕ ಕಿರಣ್ ಕುಮಾರ್ ಬಿ. ಉಪಸ್ಥಿತರಿದ್ದರು.
ಕುಮುದಾಕ್ಷ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರತ್ನಾಕರ ಎಂ. ಹೆಗ್ಡೆ ವಂದಿಸಿದರು.
