ಮೂಡುಬಿದಿರೆ: ಇಲ್ಲಿನ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮೂಡುಬಿದಿರೆ ಇದರ 4 ನೇ ವಾರ್ಷಿಕ ಮಹಾಸಭೆಯು ಸಮಾಜ ಮಂದಿರದಲ್ಲಿ ರವಿವಾರ ಜರುಗಿತು.
ಸಹಕಾರಿಯ ಅಧ್ಯಕ್ಷ ಸುರೇಶ್ ಪೂಜಾರಿ ಎಂ.ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ನಡೆದು ಬಂದ ದಾರಿ ಹಾಗೂ ವರದಿ ವರ್ಷಕ್ಕೆ 10% ಡಿವಿಡೆಂಟ್ ಘೋಷಿಸಿದರು.
ನಿರ್ದೇಶಕ ರಂಜಿತ್ ಪೂಜಾರಿ 2016-17 ನೇ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಪ್ರಸ್ತುತ ಪಡಿಸಿ ದಾಖಲಿಸಿದರು.

ಸಹಕಾರಿಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ ಮಧ್ಯಸ್ಥ 2017-18 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಪ್ರತಿಭಾ ಬಜೆಟ್‍ಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಜೂರಾತಿಯನ್ನು ಪಡೆದುಕೊಂಡರು. ನಿರ್ದೇಶಕ ರತ್ನಾಕರ ಪೂಜಾರಿ 2017-18 ನೇ ಸಾಲಿನ ಬಜೆಟ್ ಮಂಡಿಸಿದರು.
ಮೂಡುಬಿದಿರೆಯ ಸ್ಫೂರ್ತಿ ಭಿನ್ನ ಸಾಮಥ್ರ್ಯ ಶಾಲೆಗೆ ಸಹಕಾರಿ ವತಿಯಿಂದ ಧನ ಸಹಾಯ ನೀಡಲಾಯಿತು. 4 ಸ್ವಸಹಯ ಸಂಘದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಸಹಕಾರಿಯ ನಿರ್ದೇಶಕ ರಮೇಶ್ ಎಸ್.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಗೋಪಾಲ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಪಿ.ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಉಷಾ ವಂದಿಸಿದರು.
