ಮೂಡುಬಿದಿರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಸಿಬ್ಬಂದಿ ಶೈಲಜಾ ಮೂಡುಬಿದಿರೆ (62) ಅಲ್ಪಕಾಲದ ಅಸೌಖ್ಯದಿಂದ ತಡರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆ.27ರಂದು ನಿಧನ ಹೊಂದಿದರು.
ಅವರು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬಂದಿಯಾಗಿ ಮೂಡಿಗೆರೆಯಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದ ಅವರು ಬಳಿಕ ಮೂಡುಬಿದಿರೆ ಶಾಖೆಯಲ್ಲಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ 2016ರಲ್ಲಿ ನಿವೃತ್ತಿ ಹೊಂದಿದ್ದರು.

