ಬಂಟ್ವಾಳ: ಬಿ.ಸಿ ರೋಡಿನ ಹ್ರದಯ ಭಾಗದಲ್ಲಿ ಬಿದ್ದಂತಹ ಸಾವಿರಾರು ರೂ ಹಣವನ್ನು ವಾರಸುದಾರ ರಿಗೆ ಮರಳಿ ಕೈ ಸೇರಿದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ನಡೆಯಿತು.
ಆ.28 ಮಂಗಳವಾರದಂದು ಬೆಳಿಗ್ಗೆ ಸುಮಾರು 10.30 ರ ಸಮಯ ಬಿಸಿರೋಡು ರಕ್ತೇಶ್ವರಿ ದೇವಿ ದೇವಸ್ಥಾನ ದ ಮುಂಬಾಗದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಸಿಬ್ಬಂದಿ ಕುಮಾರ್ ಅಂಗಡಿ ಹಾಗೂ ವ್ರತ್ತ ನಿರೀಕ್ಷಕ ರ ಕಚೇರಿಯ ಸಿಬ್ಬಂದಿ ಶ್ರೀ ಧರ್ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿದ್ದಿದ್ದ 11,000 ಸಾವಿರ ಹಣವನ್ನು ನಗರ ಠಾಣೆಗೆ ಹಸ್ತಾಂತರ ಮಾಡಿದ್ದರು.

ಆ ಬಳಿಕ ಈ ವಿಷಯವನ್ನು ಮಾಧ್ಯಮ ಗಳ ಮೂಲಕ ಹಣದ ವಾರಸುದಾರರಿಗೆ ತಿಳಿಸುವ ಕೆಲಸ ಮಾಡಲಾಗಿತ್ತು. ಮಾಧ್ಯಮ ವರದಿಯನ್ನು ಗಮನಿಸಿ ಹಣ ಕಳೆದುಕೊಂಡ ಬಂಟ್ವಾಳ ತಾಲೂಕಿನ ನೆತ್ತರಕೆರೆ ನಿವಾಸಿ ರವಿ ಅವರು ಠಾಣೆಗೆ ಅಗಮಸಿ ಹಣವನ್ನು ಕಳೆದುಕೊಂಡ ಬಗ್ಗೆ ವಿವರವಾಗಿ ತಿಳಿಸಿ ಹಣವನ್ನು ಪಡೆದುಕೊಂಡರು.
ಜನಾರ್ದನ ಮಡಿವಾಳ ಅವರು ಜಾಗದ ಸರ್ವೆ ಮಾಡಿಸಲು ಹನ್ನೊಂದು ಸಾವಿರ ಹಣವನ್ನು ರವಿ ಅವರಿಗೆ ನೀಡಿದ್ದರು. ರವಿ ಅವರು ಯಾವುದೋ ಕೆಲಸಕ್ಕಾಗಿ ಕಿಸೆಯಿಂದ ಹಣ ತೆಗೆದಾಗ ಈ ಹಣ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ನಗರ ಠಾಣಾ ಎಸ್ ಐ. ಚಂದ್ರಶೇಖರ್ ಅವರ ಸಮಕ್ಷಮ ಹಣವನ್ನು ವಾರಸುದಾರ ರಿಗೆ ನೀಡಲಾಯಿತು.
