ಶಿರ್ವ: ಇಲ್ಲಿನ ಸ್ಥಳೀಯ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಯುವ ಕೌಶಲ್ಯಾಭಿವೃದ್ಧಿ ಶಿಬಿರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆ. 23 ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರದಲ್ಲಿ ಸೈಂಟ್ ಅಲೋಸಿಯಸ್ ಕಾಲೇಜಿನ ಪ್ರೊ. ರೋನಾಲ್ಡ್ ಪಿಂಟೋ ರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಯುವ ಜನರಿಗೆ ತಮ್ಮ ವೃತ್ತಿ ನೈಪುಣ್ಯತೆಯೊಂದಿಗೆ ತೀರಾ ಅಗತ್ಯವಾದ ಸಂಹವನ ಕಲೆ, ಕ್ಲಿಷ್ಟ ಸನ್ನಿವೇಶಗಳನ್ನು ನಿಭಾಯಿಸುವ ಜಾಣ್ಮೆ, ತಾರ್ಕಿಕ ಸೂಕ್ಷ್ಮತೆ ಹಾಗೂ ಸಂವೇದನಾ ಶೀಲತೆಗಳ ಮಹತ್ವವನ್ನು ಹಲವು ದೃಶ್ಯ ಮಾದ್ಯಮದ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ.ಜಿ. ಮಂಜುನಾಥ್ ರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವಾಣಿಜ್ಯ ವಿಭಾಗದ ಶ್ರೀಮತಿ ದೀಕ್ಷಿತಾ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.
