ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು ರಸ್ತೆಯ ವಿಶಾಲ್‍ನಗರ ಎಂಬಲ್ಲಿ ಪಿಕಪ್ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.accident (2)

accident (1)

ಈ ಅಪಘಾತದಲ್ಲಿ ಇರುವೈಲಿನ ಪ್ರಶಾಂತ್(25)ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬೋರುಗುಡ್ಡೆಯ ನಾಗೇಶ್(24) ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಂಧಿನಗರದಲ್ಲಿ ಫ್ಯಾಬ್ರಿಕೇಶನ್ ಶಾಪ್ ಹೊಂದಿರುವ ಇವರು ಕೊಡಂಗಲ್ಲಿನಲ್ಲಿ ಶುಕ್ರವಾರ ಆರಂಭಗೊಂಡ ತಮ್ಮ ಸ್ಮೇಹಿತನ ಗ್ಯಾರೇಜಿಗೆಂದು ಮೂಡುಬಿದಿರೆಯಿಂದ ಮಹಾವೀರ ಕಾಲೇಜು ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದರು. ವೇಣೂರು ಕಡೆಯಿಂದ ಬಂದ ಪಿಕಪ್ ವಿಶಾಲ್‍ನಗರದಲ್ಲಿ ವಿರುದ್ಧ ದಿಕ್ಕಿನಿಂದ ಬೈಕ್‍ಗೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಆರೋಪಿ ಪಿಕಪ್ ಚಾಲಕ ಬೆಳ್ತಂಗಡಿ ಕಕ್ಕಿಂಜೆಯ ವೀರಪ್ಪ ಗೌಡ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *