ಮೂಡುಬಿದಿರೆ : ದೇವಾಡಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ವೇದಮೂರ್ತಿ ಮುರಳೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಶ್ರೀರಾಮ ಮಂದಿರದಲ್ಲಿ ನಡೆಯಿತು.

devadiga news

ದೇವಾಡಿಗರ ಸಂಘದ ಮಹಿಳಾ ವೇದಿಕೆಯ ಭಾರತಿ-ರತ್ನಾಕರ ದೇವಾಡಿಗ ದಂಪತಿಗಳ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯದಲ್ಲಿ 292 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ದೇವಾಡಿಗರ ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ, ಮಾಜಿ ಅಧ್ಯಕ್ಷ ರತ್ನಾಕರ ಮೊಯಿಲಿ, ಯುವ ವೇದಿಕೆಯ ಅಧ್ಯಕ್ಷ ಸುಮಂತ್ ದೇವಾಡಿಗ, ಮಹಿಳಾ ವೇದಿಕೆಯ ಪದಾಧಿಕಾರಿಗಳಾದ ಶಕುಂತಳಾ, ರಮಾ ಪದ್ಮನಾಭ, ವಿಜಯಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *