ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಚೆನೈನ ಎಸ್‍ಆರ್‍ಎಂ ವಿಶ್ವ ವಿದ್ಯಾನಿಲಯದಲ್ಲಿ ಮುಕ್ತಾಯಗೊಂಡ ಎಸ್‍ಆರ್‍ಎಂ ಸ್ಥಾಪಕ ಮಹೋತ್ಸವ ಅಖಿಲ ಭಾರತಅಂತರ್ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

alvas-badminton
ಈ ಟೂರ್ನಿಯಲ್ಲಿ ಇಟ್ಟು ರಾಷ್ಟ್ರದ 16 ತಂಡಗಳು ಭಾಗವಹಿಸಿದ್ದು, ಟೂರ್ನಿಯ ಕ್ವಾರ್ಟರ್ ಫೈನಲ್‍ನಲ್ಲಿ ಕ್ರೆಸೆಂಟ್ ವಿಶ್ವ ವಿದ್ಯಾನಿಲಯವನ್ನು ನೇರ ಸೆಟ್‍ಗಳಿಂದ ಸೋಲಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು. ಸೂಪರ್ ಲೀಗ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಕೊಯಂಬತೂರಿನ ನಿರ್ಮಲ ತಂಡ ಹಾಗೂ ಅತಿಥೇಯs ಎಸ್‍ಆರ್‍ಎಂ ವಿಶ್ವ ವಿದ್ಯಾನಿಲಯವನ್ನು ನೇರ ಸೆಟ್‍ಗಳಿಂದ ಸೋಲಿಸಿದ್ದಲ್ಲದೆ, ಅಂತಿಮ ನಿರ್ಣಾಯಕ ಪಂದ್ಯದಲ್ಲಿ ದಿಂಡಿಗಲ್‍ನ ಓಂ ಇಸ್ಟಿಟ್ಯೂಟ್ ತಂಡವನ್ನು 35-27 ಹಾಗೂ 35-22 ನೇರ ಸೆಟ್‍ಗಳಿಂದ ಸೋಲಿಸಿ 6ನೇ ಭಾರಿ ಎಸ್‍ಆರ್‍ಎಂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

By suddi9

Leave a Reply

Your email address will not be published. Required fields are marked *