ಬಂಟ್ವಾಳ: ಮಾದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಬಿ ಬಾಲಕೃಷ್ಣ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ತಾಲೂಕಿನ ಆರೋಗ್ಯ ಮಿತ್ರದ ಉಷಾ ಇವರು ಆರೋಗ್ಯ ಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ದ ಕ ಹಾಲು ಒಕ್ಖುಟ ಮಂಗಳೂರು ಇದರ ವಿಸ್ತರಣಾಧಿಕಾರಿ ಪ್ರತಿಭಾ ಶೆಟ್ಟಿ ಸಂಘದ ಸದಸ್ಯರಿಗೆ ಸೂಕ್ತ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಮಹಾಬಲ ಭಟ್, ಚಂದ್ರಹಾಸ ಶೆಟ್ಟಿ ಸಾಗು, ಎಂ ಗೋಪಾಲಕೃಷ್ಣ ಭಟ್, ರಾಧು ಶೆಟ್ಟಿ, ಬಿ ರತಿ ಚೌಟ, ರಂಜಿನಿ ಕೆ, ಅಬೂಬಕ್ಕರ್ ಸೆರ್ಕಳ, ಕಲ್ಲಮಜಲು ಗೋಪಾಲ ಸಪಲ್ಯ, ಚೆನ್ನಪ್ಪ ಪೂಜಾರಿ ತೋಡ್ಲ, ಕೊಪ್ಪಲ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ಬಾಲಕೃಷ್ಣ ಅಡ್ಯಂತಾಯ ಸಂಘಕ್ಕೆ ಗುಣಮಟ್ಟದ ಹಾಲು ಹಾಕಿದ ಸದಸ್ಯರನ್ನು ಅಭಿನಂದಿಸಿ, ವಂದಿಸಿದರು.

