ಬೆಳ್ಮಣ್: ಅಂತರಾಷ್ಟ್ರೀಯ ಲಯನ್ಸ್ ಸೇವ ಸಂಸ್ಥೆಯು ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸೇವೆ ಮಾಡುವ ಮೂಲಕ ಗ್ರಾಮೀಣಾ ಪ್ರದೇಶಗಳ ಪ್ರಗತಿಗೆ ನೆರವಾಗುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ಜಿಲ್ಲಾ 317ರ ಸಿಯ ಪ್ರಾಂತೀಯ ಅಧ್ಯಕ್ಷ ಟಿ,ಜಿ.ಅಚಾರ್ಯ ಹೇಳಿದರು.

ಅವರು ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬಿಗೆ ಅಧಿಕೃತ ಭೇಟಿ ಹಾಗು ಸನದು ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ನ ಅಧ್ಯಕ್ಷ ವಿಕಾಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಲಯನ್ಸ್ ಕ್ಲಬಿನ ಅಧ್ಯಕ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಕೆ. ನಿತ್ಯಾನಂದ ಶೆಟ್ಟಿ ಮೂಡುಬಿದಿರೆ ಇವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸನಾವುಲ್ಲ ಶೇಕ್ ಸಚ್ಚೇರಿಪೇಟೆ ಹಾಗೂ ನಾರಾಯಣ ಮಡಿವಾಳ ಕಡಂದಲೆ ಮತ್ತು ಕ್ಲಬಿನ ಹಿರಿಯ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು.

ವಲಯಾಧ್ಯಕ್ಷ ಸೀತಾರಾಮ ಭಟ್, ಕಾರ್ಕಳ ಲಯನ್ಸ್ ಕ್ಲಬಿನ ಅಧ್ಯಕ್ಷ ನೋವೆಲ್ಲ್ ಜೆ ಡಿಸಿಲ್ವ, ಬೆಳ್ಮಣ್ ಕ್ಲಬಿನ ಅಧ್ಯಕ್ಷ ಸದಾನಂದ ಶೆಟ್ಟಿಗಾರ್,ಮತ್ತಿತರರು ಉಪಸ್ಥಿತರಿದ್ದರು. ಶ್ರೀಕಾಂತ್ ಕಾಮತ್ ಮತ್ತು ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
