(file photo)
ಲಕ್ಷ್ಮಣಪುರಿ: ಮೇ 25ರಿಂದ ಜುಲೈ 25, 2014ರ ಕಾಲಾವಧಿಯಲ್ಲಿ ಉತ್ತರಪ್ರದೇಶದಲ್ಲಿ 600 ಕೋಮುಗಲಭೆಗಳು ನಡೆದಿದ್ದು, ಅತಿಹೆಚ್ಚಿನ ಸಂಖ್ಯೆಯೆಂದು ಪರಿಗಣಿಸಲಾಗುತ್ತಿದೆ. 
(file photo)
(file photo)
ಗೋರಖಪುರದ ಬಿಜೆಪಿ ಲೋಕಸಭಾ ಸದಸ್ಯರಾದ ಯೋಗಿ ಆದಿತ್ಯನಾಥ ಇವರು ಈ ಗಲಭೆಗೆ ಮುಖ್ಯಮಂತ್ರಿ ಅಖಿಲೇಶ ಯಾದವ ಇವರನ್ನು ಹೊಣೆಗಾರರೆಂದು ಪರಿಗಣಿಸಿದ್ದಾರೆ. ವಿಶೇಷವೆಂದರೆ ಈ ಗಲಭೆಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡುವಲ್ಲಿ ಒಂದು ಸಮುದಾಯದ ಮತಾಂಧ ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಈ 600 ಕೋಮುಗಲಭೆಗಳಲ್ಲಿ ಸರಕಾರದ ಕಾಗದಪತ್ರಗಳಲ್ಲಿ ಕೇವಲ 363 ಗಲಭೆಗಳನ್ನು ಮಾತ್ರವೇ ನೋಂದಾಯಿಸಲಾಗಿದೆ. ಅದರಲ್ಲಿ ಶೇ.70ರಷ್ಟು ಗಲಭೆಗಳು ಪಶ್ಚಿಮ ಉತ್ತರಪ್ರದೇಶದಲ್ಲಿ ನಡೆದಿವೆ.
ಈ ಗಲಭೆಗಳಿಗಾಗಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಭಾಜಪ ಪಕ್ಷವನ್ನೇ ಹೊಣೆ ಎಂದು ಹೇಳುತ್ತಿವೆಯಾದರೂ ಸಮಾಜವಾದಿ ಪಕ್ಷದ ರಾಜಕಾರಣಿಗಳು ನಡೆಸಿರುವ ಒಂದು ಸಮುದಾಯದವರ ಓಲೈಕೆಯೇ ಈ ಗಲಭೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.  ಆರಕ್ಷಕರ ಅಭಿಪ್ರಾಯದಂತೆ ತೀರಾ ಚಿಕ್ಕ-ಪುಟ್ಟ ವಿವಾದಗಳು ದೊಡ್ಡ ಗಲಭೆಯಾಗಿ ಪರಿವರ್ತನೆಗೊಂಡಿವೆ.

By suddi9

Leave a Reply

Your email address will not be published. Required fields are marked *