‘ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿ ಭಾಗದವರು ಗೋವಾ ಮೂಲಕ, ಬೀದರ್, ಗುಲ್ಬರ್ಗದವರು ಹೈದರಾಬಾದ್ ಮೂಲಕ ಏರ್ ಇಂಡಿಯಾ ವಿಮಾನದಲ್ಲಿ ತೆರಳಲಿದ್ದಾರೆ. ಎಬೊಲಾ ಕಾಯಿಲೆ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದು ಕೊಳ್ಳಲಾಗಿದೆ. ಕರ್ನಾಟಕದಿಂದ ಯಾತ್ರೆ ಹೋಗುವವರಿಗೆ ಸೌದಿ ಅಥವಾ ಪಾಕಿಸ್ತಾನಿ ಹೋಟೆಲ್ಗಳ ಊಟದ ಶೈಲಿ ಹಿಡಿಸು ವುದಿಲ್ಲ. ಈ ವರ್ಷ ಮೊದಲ ಬಾರಿಗೆ ಬೆಳಗಿನ ಉಪಾಹಾರವನ್ನು ಉಚಿತವಾಗಿ ಮೆಕ್ಕಾದಲ್ಲಿ ಮಾತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಶುಲ್ಕ ವಿಧಿಸಲಾಗುತ್ತಿದೆ. ಮುಂದಿನ ವರ್ಷದಿಂದ ಮದೀನಾದಲ್ಲೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು,’ ಎಂದೂ ಹೇಳಿದರು.
‘ಹಜ್ ಯಾತ್ರೆಗೆ ಹೋಗುವವರಿಗೆ ಅನುಕೂಲವಾಗುವಂತೆ ರಾತ್ರಿ ೧೨.೩೦ರ ಬಳಿಕ ವಿಮಾನ ಸೌಲಭ್ಯ ಕಲ್ಪಿಸಿ ಎಂದರೂ ಕರ್ನಾಟಕದವರೇ ಆಗಿರುವ ವಿಮಾನ ಯಾನ ಖಾತೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಸ್ಪಂದಿಸುತ್ತಿಲ್ಲ ಎಂದು ರೋಷನ್ ಬೇಗ್ ಕಿಡಿಕಾರಿದರು. ಎರಡು ಬಾರಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಮೂರು ದಿನ ಬೆಳಗಿನ ಜಾವ ೪ ಗಂಟೆಗೆ ವಿಮಾನ, ಉಳಿದ ದಿನಗಳಲ್ಲಿ ರಾತ್ರಿ ೧೦ಗಂಟೆಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಹಜ್ಗೆ ತೆರಳುವ ಯಾತ್ರಿಗಳು ನಮಾಜ್ ಮಾಡಲು, ಸಕಾಲದಲ್ಲಿ ಊಟ ಮಾಡಲು ಸಾಧ್ಯ ವಾಗದೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು: ಸೆಪ್ಟೆಂಬರ್ 12 ರಿಂದ ಹಜ್ ಯಾತ್ರೆ ಆರಂಭವಾಗಲಿದ್ದು, ಈ ವರ್ಷ ಕರ್ನಾಟಕದ 5024 ಮಂದಿ ಹಜ್ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ದಿನದಂದು ಹಜ್ಗೆ ತೆರಳುವವರಿಗೆ ಬೀಳ್ಕೊಡುವ ಸಮಾರಂಭ ಏರ್ಪಡಿಸ ಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮೊದಲಾದವರು ಪಾಲ್ಗೊಳ್ಳಲಿದ್ದಾರೆ, ಎಂದು ವಾರ್ತಾ ಮತ್ತು ಹಜ್ ಸಚಿವ ರೋಷನ್ ಬೇಗ್ ಹೇಳಿದರು.


