ಮಂಗಳೂರು: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಶ್ರೀ ನಾರಾಯಣಗುರು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ.ನಾಯಕ್ ಸಭಾಭವನದಲ್ಲಿ ಆ.18 ಶನಿವಾರ ಪೂರ್ವಾಹ್ನ ಶಿವ ಪೂಜಾರಿ ಶ್ರೀನಾರಾಯಣಗುರು ಸಾಧನಾ ಪಥ ವಿಷಯದಲ್ಲಿ ಉಪನಿಷತ್‍ಧಾರೆಗೈದು ಉಪನ್ಯಾಸ ನೀಡಿದರು.

Kannada Dept. Narayana Guru Programme A1

ನಾರಾಯಣ ಗುರುಗಳ ಸಾಧನಾ ಕಾಲಘಟ್ಟದಲ್ಲಿ ಕೇರಳವು ಹತಾಶ ಸ್ಥಿತಿಗತಿಯಲ್ಲಿತ್ತು. ನಮ್ಮದು ಹಿಂದು, ಸನಾತನ ಧರ್ಮ, ಸರ್ವ ಶ್ರೇಷ್ಠ ಧರ್ಮ, ವಿಶ್ವದಲ್ಲೇ ನಮ್ಮದು ಸುಕುಟುಂಬ. ಆದರೆ ಧರ್ಮದ ಸೂತ್ರಗಳು ಮಾನವೀಯತೆ ಕಳಕೊಂಡಾಗ ಅದು ಧರ್ಮಗಳಾಗಲ್ಲ. ಎಲ್ಲಿ ತನಕ ದ್ವೇಷ, ಮತ್ಸರ, ಅಸಮಾನತೆ ರಹಿತ ಧರ್ಮಗಳು ಸಾಧ್ಯವಿಲ್ಲವೋ ಅಲ್ಲಿ ತನಕ ಯಾವುದೇ ಸಮಾಜದ ಉದ್ಧಾರ ಸಾಧ್ಯವಿಲ್ಲ. ಆದುದರಿಂದಲೇ ಉಪನಿಷತ್ತುಗಳನ್ನು ನಾರಾಯಣ ಗುರುಗಳು ಆಯ್ಕೆ ಮಾಡಿ ಸಮಾಜ ಸುಧಾರಣೆಗೆ ನಿಷ್ಠಾವಂತರಾಗಿದ್ದರು ಎಂದು ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ ತಿಳಿಸಿದರು.

Kannada Dept. Narayana Guru Programme 5
ಕೇರಳದಲ್ಲಿ ಬಹುಮುಖ್ಯ ಶೋಷಣೆ ಮೇಲುವರ್ಗದಿಂದ ತಳವರ್ಗದ ವರೆಗೆ ನಡೆಯುತ್ತಿವಂತಹ ಕಾಲ. ಕೇರಳ ಹತಾಶ ಸ್ಥಿತಿಗೆ ತಲುಪುವಂತಹ ಕಾಲದಲ್ಲೇ ನಾರಾಯಣ ಗುರುಗಳು ಜನಿಸಿದರು. ವಿಶ್ವವೇ ಒಂದು ಕುಟುಂಬ ಎನ್ನುವಂತಹ ಧರ್ಮ ಅಂದು ಇತ್ತು. ಆದರೂ ಅಂತಹ ಸ್ಥಿತಿ ಏಕಾಯ್ತು ಎಂದು ಚಿಂತಿಸ ತಕ್ಕದು. ಧರ್ಮದ ಸೂತ್ರ ಎಷ್ಟು ಗಣತರವಾಗಿದ್ದರೂ ಮಾನವತೆ ಇಲ್ಲದೆ ಹೋದಾಗ ಯಾವುದೇ ಸಮುದಾಯ ಅಥವಾ ವ್ಯಕ್ತಿ ಉದ್ಧಾರವಾಗದು. ಇದನ್ನೆಲ್ಲಾ ಅರಿತ ಅವರು ಉಪನಿಷತ್ತನ್ನು ಆಳವಾಗಿ ಅಧ್ಯಯನ ಮಾಡಲು ತೊಡಗಿದರು. ದ್ವೈತವೇ ಆಗಲಿ ಅದ್ವೈತವೇ ಆಗಲಿ ಉಪನಿಷತ್ತು ಯಾವುದರಲ್ಲೂ ಭೇದವನ್ನು ಮಾಡಲ್ಲ. ನಾರಾಯಣ ಗುರುಗಳ ಈ ಅದ್ವೈತವನ್ನು ಬೇರೆಬೇರೆ ಮೂಲಗಳಿಂದ ಕಲಿತು ಕೊಂಡರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬುದನ್ನು ನಾರಾಯಣ ಗುರುಗಳು ಪ್ರತಿಪಾದಿಸಿದರು ಎಂದೂ  ತಿಳಿಸಿದರು.

Kannada Dept. Narayana Guru Programme B3

Kannada Dept. Narayana Guru Programme B2

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದು ನಾರಾಯಣಗುರು ಬರೇ ಸಂತ ಸನ್ಯಾಸಿವಲ್ಲ, ಬದಲಾವಣೆಗಳ ಹರಿಕಾರರಾಗಿ ಸಮಾಜ ಸುಧಾರಕರಾಗಿ ಶ್ರಮಿಸಿದ್ದರು. ಮಹಾನ್ ದಾರ್ಶನಿಕರಾಗಿದ್ದ ಅವರ ಜೀವನ ಉತ್ತರ ಭಾರತದಲ್ಲೂ ನಾರಾಯಣ ಉಲ್ಲೇಖವಾಗಿವೆ. ಗುರುವರ್ಯರು ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸಮಾಜ ನ್ಯಾಯ ಒದಗಿಸಿದ್ದರು. ಸಾಮರಸ್ಯದ ಬಾಳಿಗಾಗಿ ಒಳಿತನ್ನು ಯುವ ಸಮಾಜಕ್ಕೆ ವಿಸ್ತರಿಸಿದವರು. ತಳಸ್ಪರ್ಶಿಯಾಗಿ ಸುಧಾರಣಕರಿಸಿದ ಅವರ ಪಾಂಡಿತ್ಯವೂ ಅನನ್ಯವಾದುದು ಎಂದು ಹೇಳಿದರು.

Kannada Dept. Narayana Guru Programme A2

ಭಾರತದ ಸಾಮಾಜಿಕ ಸುಧಾರಕರಾಗಿದ್ದ ನಾರಾಯಣಗುರು ಕೇರಳದಲ್ಲಿ ಸುಧಾರಣೆ ಚಳುವಳಿ ನಡೆಸಿದ್ದರು. ಹಿಂದುಳಿದ ಸಮಾಜಗಳು ಸಹಿಸಲಾಗದ ಅನ್ಯಾಯ ಎದುರಿಸುತ್ತಿದ್ದಾಗ ನಾರಾಯಣಗುರು ಹೇಗೆ ಸಮಾಜ ಬದಲಾವಣೆಗೆ ಪಣತೊಟ್ಟರು ಎನ್ನುವುದು ತಿಳಿಯುವ ಅಗತ್ಯ ಸದ್ಯಕ್ಕಿದೆ. ಜಾತಿ ತತ್ವವನ್ನು ತಿರಸ್ಕರಿಸಿ ಆಧ್ಯಾತ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯ ಹೊಸ ಮೌಲ್ಯಗಳನ್ನು ಪ್ರೋತ್ಸಾಹಿಸಿದ ಇಂತಹ ಮಹಾನ್ ಪುರುಷರ ಅಧ್ಯಾಯನ ಪ್ರಸಕ್ತ ಯುವ ಜನತೆಗೆ ಅಗತ್ಯವಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *