ಬಂಟ್ವಾಳ: ಸಂಘ ಪರಿವಾರದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಅಸ್ತಂಗತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. 

ವಾಜಪೇಯಿ ಅವರ ಪಕ್ಷನಿಷ್ಟೆ, ಪ್ರಾಮಾಣಿಕತೆ, ಹಿಂದುತ್ವ , ಉತ್ತಮ ವ್ಯಕ್ತಿತ್ವ, ತತ್ವಾದರ್ಶ, ದೈರ್ಯ, ಸಾಹಸ ಎಲ್ಲವೂ ಕಾರ್ಯಕರ್ತರಲ್ಲಿ ಜೀವಂತವಾಗಿ ಇರಬೇಕು ಇದುವೆ ನಾವು ಅವರಿಗೆ ನೀಡುವ ಶ್ರದ್ಧಾಂಜಲಿ ಎಂದು ಅರ್.ಎಸ್.ಎಸ್. ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಡಾ .ಪ್ರಭಾಕರ ಭಟ್ ಹೇಳಿದರು. ಇದಕ್ಕೂ ಮುನ್ನ ಅಜಾತಶತ್ರುಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಕಲ್ಲಡ್ಕ ಶ್ರೀ ರಾಮಮಂದಿರದಿಂದ ಶ್ರದ್ಧಾಂಜಲಿ ನಡಿಗೆ ಕಲ್ಲಡ್ಕ ಪೇಟೆ ಯಲ್ಲಿ ಕಾಲ್ನಡಿಗೆ ಯ ಮೂಲಕ ಪೇಟೆಯ ಮೂಲಕ ಕರಿಂಗಾನ ಕ್ರಾಸ್ ವರೆಗೆ ಸಾಗಿ ಬಳಿಕ ಕಲ್ಲಡ್ಕ ಶ್ರೀ ರಾಮ ಮಂದಿರ ಕ್ಕೆ ಬಂದು ಶ್ರದ್ಧಾಂಜಲಿ ಸಭೆ ನಡೆಯಿತು.


