ಮೂಡುಬಿದಿರೆ: ಸವಿತಾ ಸಮಾಜ ಮೂಡುಬಿದಿರೆ ಇದರ ಮಹಾಸಭೆ, ನೂತನ ಪದಾಧಿಕಾರಿಗಳ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಆ.7 ಮಂಗಳವಾರ ಜರುಗಿತು.

savitha samaja (1)
ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆಯಲ್ಲಿ ಶಾಸಕರನ್ನು ಶಾಲು, ಮೈಸೂರು ಪೇಟ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮೂಡುಬಿದಿರೆ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಾಂತ್ಯ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಸವಿತಾ ಸಮಾಜದ ದಶಮಾನೋತ್ಸವ ಪ್ರಯುಕ್ತ ದ.ಕ.ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಕುಳಾಯಿ, ಮಾಜಿ ಕಾರ್ಯಾಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿ.ಸಿ.ರೋಡು, ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಎಲ್.ಬಂಗೇರಾ, ರಾಜ್ಯ ಪ್ರತಿನಿಧಿ ವಸಂತ ಬೆಳ್ಳೂರು, ಮೂಡುಬಿದಿರೆ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಾಂತ್ಯ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬಿದಿರೆ ಇವರನ್ನು ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನಿಸಿದರು.

savitha samaja (2)
ಮೂಡುಬಿದಿರೆ ಸವಿತಾ ಸಮಾಜದ ಏಳಿಗೆಗೆ ಶ್ರಮಿಸಿದ ತಿಮ್ಮಪ್ಪ ಸುವರ್ಣ ಕಲ್ಲಮುಂಡ್ಕೂರು , ಆನಂದ ಸುವರ್ಣ ಮೂಡುಬಿದಿರೆ, ಸತೀಶ್ ಭಂಡಾರಿ ಪುತ್ತಿಗೆ, ಸುರೇಶ್ ಭಂಡಾರಿ ಕುಂಗೂರು, ಸಂತೋಷ್ ಕುಮಾರ್ ಬೆಳುವಾಯಿ, ಸುರೇಂದ್ರ ಭಂಡಾರಿ ಕಲ್ಲಮುಂಡ್ಕೂರು, ಪ್ರಕಾಶ್ ಭಂಡಾರಿ ಕಾನ, ವಿಶ್ವನಾಥ ಭಂಡಾರಿ ಕೆಸರ್‍ಗದ್ದೆ, ಕಮಲಾಕ್ಷ ಬಂಗೇರಾ, ಸುರೇಶ್ ಭಂಡಾರಿ ಗಂಟಾಲ್ಕಟ್ಟೆ, ಪದ್ಮನಾಭ ಭಂಡಾರಿ ಮಾರೂರು ಇವರನ್ನು ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು.

savitha samaja (3)

ರಾಜ್ಯ ಪ್ರತಿನಿಧಿ ವಸಂತ ಬೆಳ್ಳೂರು ಸವಿತಾ ಸಮಾಜದ ಬಗ್ಗೆ ಮಾಹಿತಿ ನೀಡಿದರು. ವರದಿ ವಾಚನ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬಿದಿರೆ ಮಂಡಿಸಿದರು. ಕೋಶಾಧಿಕಾರಿ ತಿಮ್ಮಪ್ಪ ಸುವರ್ಣ ಕಲ್ಲಮುಂಡ್ಕೂರು ಪ್ರಾರ್ಥಿಸಿ, ಕೆ.ವಿ.ರಮಣ್ ಕಾರ್ಯಕ್ರಮ ನಿರ್ವಹಿಸಿ, ಜೊತೆ ಕಾರ್ಯದರ್ಶಿ ಜಯಾನಂದ ಬಂಗೇರಾ ವಂದಿಸಿದರು.

By suddi9

Leave a Reply

Your email address will not be published. Required fields are marked *