ಮೂಡುಬಿದಿರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡುಬಿದಿರೆ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ ಮಂಗಳವಾರ ನಡೆಯಿತು.

kabaddi (2)
ಕಾರ್ಯಕ್ರಮವನ್ನು ಶಾಸಕ ಉಮನಾಥ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಾಠ ಮಾತ್ರವಲ್ಲದೆ ಆಟದಲ್ಲಿಯೂ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ಸಾಮಥ್ರ್ಯಕ್ಕೆ ಕ್ರೀಡೆ ಮುಖ್ಯ. ಇಂದು ಪ್ರೋಕಬಡ್ಡಿ ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಅದರಂತೆಯೇ ಮುಂದಿನ ದಿನಗಳಲ್ಲಿ ಈ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಈ ಭಾಗದ ಮಕ್ಕಳಿಗೆ ಕ್ರೀಡೆ ಹಾಗೂ ಎಲ್ಲಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಒಳ್ಳೆಯ ಅವಕಾಶ ಸಿಗುತ್ತಿರಲಿ ಎಂಧು ಶುಭ ಹಾರೈಸಿದರು.

kabaddi (3)
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಆಶಾ, ಪುರಸಭಾ ಸದಸ್ಯ ಪ್ರಸಾದ್ ಭಂಡಾರಿ, ಎಸ್‍ಟಿಎಂಸಿಯ ಸೆಲ್ವ ಕುಮಾರ್, ಉದ್ಯಮಿ ಅಲ್ವಿನ್ ಡಿಸೋಜಾ, ಸಮೃದ್ಧಿ ಯೂತ್ ಕ್ಲಬ್‍ನ ಪ್ರಕಾಶ್ ಕುಂದರ್, ಸಿಆರ್‍ಪಿ ಡೇಸಿ ಪಿಂಟೋ,ದೈಹಿಕ ಶಿಕ್ಷಕ ಶಿವಾನಂದ ಕಾಯ್ಕಿಣಿ, ಪ್ರಭಾರ ಮುಖ್ಯ ಶಿಕ್ಷಕಿ ಮೋಹಿನಿ, ಹಳೇ ವಿದ್ಯಾರ್ಥಿ ರಾಜಗೋಪಾಲ ಹಾಗೂ ಕುಮಾರ್, ಶಾಲಾ ನಾಯಕ ಪ್ರಣವ್ ಉಪಸ್ಥಿತರಿದ್ದರು.
ಶಿಕ್ಷಕಿ ಸಂಗೀತಾ ಸ್ವಾಗತಿಸಿದರು. ಸ್ರೀನಿವಾಸ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *