ಗಂಜಿಮಠ: ಗಂಜಿಮಠ ಗ್ರಾಮ ವ್ಯಾಪ್ತಿಯ ನಾರಳ-ಸಂಕೇಶದ ವ್ಯಾಪ್ತಿಯ ಕಲಾವರ್ಧಕ ಯುವಕ ಸಂಘ, ಕಲಾಚೇತನ ಯುವತಿ ಮಂಡಲ, ಸ್ತ್ರೀಶಕ್ತಿ ಗುಂಪು ಆಶ್ರಯದಲ್ಲಿ ನಾರಳದ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ `ಆಟಿದ ನೆಂಪು’ ಕಾರ್ಯಕ್ರಮವು ಆ.5 ಭಾನುವಾರ ಜರುಗಿತು.

narala-ganjimata (1)

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಪಂ ಸದಸ್ಯ ಸುನಿಲ್ ಕುಮಾರ್ ಮಾತನಾಡಿ, ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯರು ಒಗ್ಗೂಡಿ ಕೆಲಸ ಮಾಡುತ್ತಾರೆ. `ಆಟಿದ ನೆಂಪು’ ತುಳುನಾಡ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಹೇಳಿದರು.

narala-ganjimata (2)

ಗಂಜಿಮಠ ಗ್ರಾಪಂ ಸದಸ್ಯ ಜಯಾನಂದ ಕುಲಾಲ್ ಮಾತನಾಡಿ, ತುಳುನಾಡ ಒಡನಾಟದ ಇಂತಹ ಕಾರ್ಯಕ್ರಮಗಳಿಂದ ಚಿಕ್ಕ ಮಕ್ಕಳಿಗೆ ನಮ್ಮ ಹಳೆಯ ಆಚಾರ-ವಿಚಾರಗಳ ಮಾಹಿತಿ ನೀಡಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು.

ಮಧ್ಯಾಹ್ನದ ಊಟೋಪಚಾರಕ್ಕೆ ತುಳುನಾಡ ತಿಂಡಿ ತಿನಸುಗಳಾದ ಪತ್ರೋಡೆ, ಉಪ್ಪಡ್ ಪಚ್ಚಿರ್, ಬಗೆಬಗೆಯ ಚಟ್ನಿ, ಸಾರ್ನಡ್ಡೆ(ಕುಡುಪಡ್ಡೆ), ತೇವು(ಸೇವು) ತೇಟ್ಲದ ಪಲ್ಯ, ಕುಕ್ಕುದ ಉಪ್ಪಡ್(ಮಾವಿನ ಉಪ್ಪಿನಕಾಯಿ) ಸಿದ್ಧಗೊಂಡಿತ್ತು.  ಇಲ್ಲಿ ಮಕ್ಕಳಿಗೆ ತುಳುನಾಡ ನೆನಪು ಮರುಕಳಿಸುವ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

narala-ganjimata (3)

 

ಯುವಕ ಸಂಘದ ಅಧ್ಯಕ್ಷ ಅಕ್ಷಿತ್ ಸಾಮಾನಿ, ಸ್ತ್ರೀಶಕ್ತಿ ಗುಂಪಿನ ಉಮಾಕ್ಷಿ, ಮಹಿಳಾ ಮಂಡಲದ ಅಧ್ಯಕ್ಷೆ ನಯನಾ ಶೆಟ್ಟಿ, ಭಜನಾ ಮಂದಿರದ ಮಾಜಿ ಅಧ್ಯಕ್ಷ ವಿಶ್ವನಾಥ ರಾವ್, ಗ್ರಾಪಂ ಸದಸ್ಯೆ ರಮಿತಾ ಶಿವರಾಜ್ ಹಾಗೂ ಸ್ತ್ರೀಶಕ್ತಿ ಅಧ್ಯಕ್ಷೆ ಸುಮಿತ್ರಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ವಸಂತ ಶೇಣವ ವಂದಿಸಿದರು.

By suddi9

Leave a Reply

Your email address will not be published. Required fields are marked *