ರಾಮನಗರ: ದೆಹಲಿ ಪೋಲಿಸರು ವಿಶೇಷ ಕಾರ್ಯಾಚರಣೆ ನಡೆಸಿ, ಓರ್ವ ನಕ್ಸಲ್‍ನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್ ಮೂಲದ ಮುನೀರ್ ಬಟ್ಟೆ ವ್ಯಾಪಾರಿಯಾಗಿದ್ದು, ರಾಮನಗರದ ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದ. ತನ್ನ ಪತ್ನಿಯೊಂದಿಗೆ ರಾಮನಗರದಲ್ಲಿ ವಾಸವಿದ್ದ. ಬಂಧಿತ ನಕ್ಸಲ್ ಮುನೀರ್ ಅಹ್ಮದ್ ಬೆಂಗಳೂರಿನ ಹಲವೆಡೆ ಸ್ಪೋಟ ನಡೆಸಲು ಸಂಚು ನಡೆಸಿದ್ದ ಎನ್ನುವ ಮಾಹಿತಿ ಹೊರ ಹಾಕಿದ್ದಾನೆ. ದೆಹಲಿ ಪೋಲಿಸರು ಮುನೀರ್ ಅಹ್ಮದ್‍ನನ್ನು ಬಂದಿಸಿದ್ದು, ಮುನೀರ್ ಮನೆಯಲ್ಲಿ ಲ್ಯಾಪ್‍ಟಾಪ್ ಮತ್ತು ಸ್ಪೋಟಕಗಳಾದ ಜಿಲೆಟಿನ್ ಕಡ್ಡಿಗಳು ಮತ್ತು ಕೇಬಲ್ ವೈಯರ್‍ಗಳು ಪತ್ತೆಯಾಗಿದೆ.
