ಮೂಡುಬಿದಿರೆ: ಶಾಸಕ ಉಮನಾಥ್ ಕೋಟ್ಯಾನ್ ಗ್ರಾಮ ಕರಣಿಕ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಆ.3ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಸಿದರು.
ನಾವು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಷ್ಟದಲ್ಲಿರುವ ಮತ್ತು ಅಗತ್ಯ ಸೌಲಭ್ಯ ಬೇಕಾಗಿರುವ ಬಡವರ ಸಮಸ್ಯೆಗೆ ಸ್ಪಂದಿಸಬೇಕು. ಸರಕಾರಿ ಕೆಲಸವನ್ನು ಪಡೆಯಲು ನೀವು ಪಟ್ಟ ಕಷ್ಟದಂತೆ, ಬಡ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ದಿನಕೂಲಿ ಮಾಡಿ ಕಷ್ಟ ಪಡುತ್ತಾರೆ. ಅವರನ್ನು ಸತಾಯಿಸದೇ ಅವರ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಬಡವರ ಸೇವೆ ಮಾಡುವುದು ಪುಣ್ಯದ ಕೆಲಸ. ಸರಕಾರಿ ಕಛೇರಿಗಳಲ್ಲಿ ಬಡವರಿಗೆ ಯಾವುದೇ ಅನ್ಯಾಯವಾದಲ್ಲಿ ಸೂಕ್ತ ಕ್ರಮ ಕೈತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಶಾಸಕರ ಸಭೆಯಲ್ಲಿ ಗ್ರಾಮ ಕರಣಿಕ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಯಿತು. ನಿವೇಶನ ಮತ್ತು ಮನೆ ಇಲ್ಲದವರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು. ಸಂಧ್ಯಾ ಸುರಕ್ಷಾ, ಅಂಗವೈಫಲ್ಯ, ವೃದ್ಧಾಪ್ಯ ವೇತನ, ವಿಧವಾ ವೇತನ, ಶವಸಂಸ್ಕಾರಕ್ಕೆ ಹಣ ಇವೆಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವುದರ ಮೂಲಕ ಪ್ರತಿಯೊಬ್ಬರಿಗೂ ತಲುಪಬೇಕು.

ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ 6 ತಿಂಗಳ ಒಳಗೆ ಸಂಬಂಧಪಟ್ಟವರಿಗೆ ತಲುಪಬೇಕು. ಗ್ರಾಹಕರು ಸಲ್ಲಿಸುವ ಯಾವುದೇ ಅರ್ಜಿಯನ್ನು ತಿರಸ್ಕರಿಸಬಾರದು. ಆರ್‍ಟಿಸಿಗಳಲ್ಲಿ ಹೆಸರು ಹಾಗೂ ಮಾಹಿತಿಯನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ. ಇದರಿಂದ ಕಷ್ಟ ಅನುಭವಿಸಬೇಕಾದವರು ಬಡವರು.
ಇದಲ್ಲದೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಇಲಾಖಾ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ವಿನೋದ್ ಬೊಳ್ಳೂರು, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್ ದಿನೇಶ್ ಪಜಾರಿ, ನಾಗರಾಜ್ ಪೂಜಾರಿ, ಪ್ರಸಾದ್ ಭಂಡಾರಿ, ತೆಂಕಮಿಜಾರು ಗ್ರಾ.ಪಂ ಸದಸ್ಯ ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

