ಕೈಕಂಬ: ಎಚ್‍ಪಿಸಿಎಲ್‍ನ ಎಸ್‍ವಿ ಸ್ಟೇಷನ್‍ಗಳಲ್ಲಿ ಸರ್ವಿಸ್‍ಗಾರ್ಡ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಏಕಾಏಕಿ ಕೈಬಿಟ್ಟು ಹೊಸಬರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಮಳಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಕಂಪೆನಿ ಅಧಿಕಾರಿಗಳು ಸ್ಪಂದಿಸದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

3vp tent alavadisi pratibatane
ಸ್ಥಳಕ್ಕೆ ತಾಲೂಕು ಪಂಚಾಯತ್ ಸದಸ್ಯ ಸುನಿಲ್ ಕುಮಾರ್ ಅವರು ಆಗಮಿಸಿದ್ದು, ಇದೇ ಉದ್ಯೋಗವನ್ನು ನಂಬಿಕೊಂಡು ಮನೆಮಂದಿ ಬದುಕುತ್ತಿದ್ದು, ಅವರನ್ನು ಏಕಾಏಕಿ ಕೈಬಿಟ್ಟರೆ ಇಡೀ ಕುಟುಂಬವೇ ಬೀದಿಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಪೈಪ್‍ಲೈನ್‍ಗೆ ಭೂಮಿನ್ನು ಕೊಡುವಾಗ ಅಂದಿನ ಜಿಲ್ಲಾಧಿಕಾರಿಗಳು ಭೂಮಿ ಕಳೆದುಕೊಳ್ಳುವ ಸ್ಥಳೀಯರಿಗೆ ಉದ್ಯೋಗ ಕೊಡಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ ಇದೀಗ ಕಂಪೆನಿ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದು, ಕಂಪೆನಿ ಕಷ್ಟಕ್ಕೆ ಸ್ಪಂದಿಸದೇ ಇದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಎಚ್‍ಪಿಸಿಎಲ್ ಮುಖ್ಯ ಘಟಕದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

3vphpcl gataka
ಗಂಜಿಮಠ ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ಮಾತಾಡಿ, ನಿನ್ನೆ ಪಂಚಾಯತ್‍ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಉದ್ಯೋಗಿಗಳ ಪರವಾಗಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು, ಉದ್ಯೋಗಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡದಂತೆ ಮನವಿ ಸಲ್ಲಿಸಲಾಗುವುದು ಎಂದರು.
ಪ್ರತಿಭಟನೆಯ ಬಗ್ಗೆ ಮಾಹಿತಿ ಬಂದಿದ್ದರೂ ಅಧಿಕಾರಿಗಳು ಪ್ರತಿಭಟನಾ ನಿರತ ಸ್ಥಳಕ್ಕೆ ಧಾವಿಸಲಿಲ್ಲ. ಸಂಜೆಯವರೆಗೂ ಅಧಿಕಾರಿಗಳು ಧಾವಿಸದೇ ಇರುವುದರಿಂದ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಹೊಸತಾಗಿ ಟೆಂಡರ್ ಕೊಟ್ಟು, ಈಗಿರುವವ ಕೆಲಸಗಾರರನ್ನು ಕೈಬಿಟ್ಟು ನಿವೃತ್ತ ಯೋಧರನ್ನು ನೇಮಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದುವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿದ್ದು ಇನ್ನೂ ಅಧಿಕಾರಿಗಳು ಸ್ಪಂದಿಸಿಲ್ಲ. ಆದ್ದರಿಂದ ಕಂಪೆನಿಯ ಮುಖ್ಯ ಘಟಕದ ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಂಪೆನಿಯ ಮುಂದೆ ಟೆಂಟ್ ಅಳವಡಿಸಿ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಪ್ರತಿಭಟನೆಗೆ ಸ್ಥಳೀಯ ಮುಖಂಡರಾದ ಸೋಹನ್ ಅಥಿಕಾರಿ, ಚಂದ್ರಹಾಸ ನಾರಳ, ತಮ್ಮಯ ಪೂಜಾರಿ, ಥೋಮಸ್, ಪಂಚಾಯತ್ ಸದಸ್ಯರಾಗಿರುವ ನೋಣಯ್ಯ ಕೋಟ್ಯಾನ್, ಜಯಾನಂದ ಕುಲಾಲ್, ಸಂದೀಪ್ ಶೆಟ್ಟಿ, ಹಲಾವಾರ ಸ್ಥಳೀಯರು ಸೇರಿ ಸಾಥ್ ನೀಡಿದರು.
ಸ್ಪಂದಿಸದೇ ಇದ್ದರೆ ತೀವ್ರ ಹೋರಾಟ: ಹಿಂಜಾವೇ ಮುಖಂಡ ಹರೀಶ್ ಮಟ್ಟಿ

ಹಿಂದೂ ಜಾಗರಣ ವೇದಿಕೆ ಗುರುಪುರ ಪ್ರಖಂಡ ಸಂಚಾಲಕರಾಗಿರುವ ಹರೀಶ್ ಮಟ್ಟಿಯವರು ಪ್ರತಿಭಟನಾ ನಿರತರ ಜೊತೆ ಧರಣಿ ಕುಳಿತಿದ್ದರು. ಯಾವುದೇ ಕಾರಣಕ್ಕೂ ಹೊಸತಾಗಿ ಯಾರನ್ನೂ ನೇಮಿಸಿದೆ ಈಗಿರುವವರನ್ನೇ ಕೆಲಸದಲ್ಲಿ ಮುಂದುವರಿಸಬೇಕು. ಉದ್ಯೋಗಿಗಳಿಗೆ ಮುನ್ಸೂಚನೆಯಾಗಲೀ, ನೋಟೀಸಾಗಲಿ ನೀಡದೆ ಏಕಾಏಕಿ ಕೈಬಿಡುವುದು ಸರಿಯಲ್ಲ. ಆದ್ದರಿಂದ ಅಧಿಕಾರಿಗಳು ಇನ್ನೂ ಸ್ಪಂದಿಸದೇ ಇದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

 

By suddi9

Leave a Reply

Your email address will not be published. Required fields are marked *