ಬಂಟ್ವಾಳ: ಗಾಣೆಮಾರ್ ಬಡಕಬೈಲು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಇದರ ಆಶ್ರಯದಲ್ಲಿ ಚಿಣ್ಣರ ವೇದಿಕೆ ಉದ್ಘಾಟನೆ ಹಾಗೂ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಆ.4 ಗಾಣೆಮಾರ್ ಅಂಗನವಾಡಿ ಕೇಂದ್ರದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ಅಧ್ಯಕ್ಷರಾದ ಇಬ್ರಾಹೀಂ ನವಾಝ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಜಿಪ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ್, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ, ಉದ್ಯಮಿ ವಿವೇಕ್ ರೈ ಕುತ್ತಾರ್, ಕರಿಯಂಗಳ ಗ್ರಾಮ ಪಂಚಾಯತ್ ಪಂ. ಅಭಿವೃದ್ಧಿಯ ಪದ್ಮ, ಬಂಟ್ವಾಳ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಇಂದಿರಾ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಪೂಜಾರಿ, ಕರಿಯಂಗಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಹ್ಮದ್ ಬಶೀರ್, ಉದ್ಯಮಿಗಳಾದ ಹರಿಪ್ರಸಾದ್ ರೈ ಪೊಳಲಿ, ಉಮೇಶ್ ಆಚಾರ್ಯ, ಚಂದ್ರಹಾಸ ಪಳ್ಳಿಪಾಡಿ, ರಾಜ್ ಕೋಟ್ಯಾನ್, ಸಮಾಜ ಸೇವಕ ಬಿ.ಎಸ್ ಮುಹಮ್ಮದ್ ಬಡಕಬೈಲು, ಗಿತೇಶ್ ಬಡಕಬೈಲು, ಭಾಗವಹಿಸಲಿದ್ದಾರೆ.
ಗಾಣೆಮಾರ್ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ರೇಣುಕ ಧನ್ಯವಾದ ಸಮರ್ಪಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
