ಬಂಟ್ವಾಳ : ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಜರಗಿದ ಭಾರತ ಸೇವಾದಳದ ಶಾಖಾ ನಾಯಕರ ಸಭೆಯಲ್ಲಿ ಭಾರತ ಸೇವಾದಳದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಭಾರತ ಸೇವಾದಳದ ಅಧ್ಯಕ್ಷರಾಗಿ ಶೇಷಪ್ಪ ಮೂಲ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಅದ್ಯಾಪಕರ ಸಹಕಾರ ಸಂಘ ನಿಯಮಿತ ವಿಟ್ಲ ಇದರ ನಿರ್ದೆಶಕರಾಗಿ , ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಬಂ.ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಅಮೆಚೂರ್ ಕಬಟ್ಟಿ ಅಸೋಶಿಯೇಶನ್ನ ಸಂಘಟನಾ ಕಾರ್ಯದರ್ಶಿಯಾಗಿ , ಕುಲಾಲ ಸೇವಾ ಸಂಘ ತುಂಬೆ ಇದರ ಸಂಚಾಲಕರಾಗಿ , ಬಂ.ತಾಲೂಕು ತುಳುಕೂಟ ಇದರ ಗೌ.ಸಲಹೆಗಾರರಾಗಿ , ಕುಲಾಲ ಯುವ ವೇದಿಕೆಯ ಗೌ.ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
