ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ ಬಿ.ಸಿ.ರೋಡು ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ವ್ಯಾಸ ಜಯಂತಿ ಆಚರಣೆ ಮತ್ತು ಕಾವ್ಯ ವಾಚನ – ಪ್ರವಚನ ಕಾರ್ಯಕ್ರಮವನ್ನು ಜು.28ರಂದು ನಡೆಯಿತು.

vyasa jayanthi (1)
ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಂಸ್ಕøತಿಯ ಬೇರಿನಿಂದ ಶಕ್ತಿಯನ್ನು ಪಡೆದು ಬೆಳೆಯಬೇಕು. ಭಾರತೀಯ ಸಾಹಿತ್ಯಗಳಲ್ಲಿ ಮನಸ್ಸು ಮತ್ತು ಹೃದಯಕ್ಕೆ ಸಂಸ್ಕಾರ ನೀಡುವ ವಿಚಾರಗಳಿವೆ. ಭಾರತೀಯ ಕಾವ್ಯಗಳ ವಾಚನ ಮತ್ತು ಪ್ರವಚನ ಮಾಡುವುದರಿಂದ ಹೊಸ ಜನಾಂಗಕ್ಕೆ ಮೌಲ್ಯಗಳ ಪರಿಚಯವಾಗುತ್ತದೆ ಎಂದು ಹೇಳಿದರು.
ಭಾರತೀಯ ಭಾಷೆಗಳಲ್ಲಿ ರಚಿತವಾಗುವ ಸಾಹಿತ್ಯಗಳಲ್ಲಿ ರಾಷ್ಟ್ರೀಯತೆಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇದೆ. ಭಾಷೆ – ಪ್ರಾಂತಗಳ ಹೆಸರಿನಲ್ಲಿ ಸಾಹಿತ್ಯವನ್ನು ಪ್ರತ್ಯೇಕಿಸುವುದು ಸರಿಯಲ್ಲ. ಭಾರತೀಯ ಸಾಹಿತ್ಯ ಪರಿಷತ್ತು 1956 ರಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಕಳೆದ 3 ವರ್ಷಗಳಿಂದ ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ. ಎಲ್ಲಾ ಭಾಷೆಗಳ ಸಾಹಿತಿಗಳನ್ನು ಒಟ್ಟು ಸೇರಿಸಿ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲಾಗುವುದು ಎಂದು ಮುಖ್ಯ ಅತಿಥಿಯಾದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕರ್ನಾಟಕ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ರಘುನಂದನ್ ತಿಳಿಸಿದರು.

vyasa jayanthi (2)
ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರಿನ ನಿವೃತ ಮುಖ್ಯೋಪಾಧ್ಯಾಯ ಪರಮೇಶ್ವರ ಹೆಗ್ಡೆ ಗುರುಪೂರ್ಣಿಮೆ ಉತ್ಸವದ ಮಹತ್ವವನ್ನು ತಿಳಿಸಿದರು. ಗಮಕಿ ನಿವೃತ ಪ್ರಾಚಾರ್ಯ ವೇದವ್ಯಾಸರು ಗದುಗಿನ ಭಾರತದ ಆಯ್ದ ಭಾಗವನ್ನು ವಾಚಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರವಚನ ನೀಡಿದರು .
ಕರ್ನಾಟಕ ತುಳು ಅಕಾಡೆಮಿ ಸದಸ್ಯೆ ವಿಜಯಾ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಕುಕ್ಕಾಜೆಮತ್ತು ನಿವೃತ ಉಪನ್ಯಾಸಕ ಕೃಷ್ಣ ಶರ್ಮ ನಿರೂಪಿಸಿದರು. ಅ.ಭಾ.ಸಾ.ಪ ತಾಲೂಕು ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ಸಂಚಾಲಕ ರಾಜಾರಾಮ ನಾಯಕ್ ವಂದಿಸಿದರು.

By Suddi9

Leave a Reply

Your email address will not be published. Required fields are marked *