ಸುದ್ದಿ9ಮೂಡುಬಿದರೆ: ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್, ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರಧಾನ ಮಾಡುವ ವೇಳೆ ಆಕಸ್ಮಾತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು ಆ ಕುಟುಂಬಕ್ಕೆ ಇನ್ನೂ ಪರಿಹಾರ ಸಿಗದಿರುವುದರಿಂದ ನೆಲ್ಲಿಕಾರು ಗ್ರಾ.ಪಂ ಕಚೇರಿಯೆದುರು ಸೋಮವಾರ ಪ್ರತಿಭಟನೆ ನಡೆಯಿತು.
ಅಖಿಲ ಭಾರತ ಕಾಮರ್ಿಕ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಸಂಸ್ಥಾಪಕ ಸುಧತ್ತ ಜೈನ್, ಉಪ್ಪಿನಂಗಡಿಯ ಧಾಮರ್ಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದ ಸಂಗಮ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಪ್ರಶಾಂತ್ ಅವರು ಮೃತಪಟ್ಟಿದ್ದು, ಘಟನೆಯನ್ನು ಗಂಭೀರತೆ ಅರಿತು, ಆತನ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಬೇಕು. ತಮ್ಮ ವ್ಯಾಪ್ತಿಗೆ ಬರುವ ನೆಲ್ಲಿಕಾರಿನ ಯುವಕನೊಬ್ಬ ಮೃತಪಟ್ಟಿದ್ದರೂ, ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಇಲ್ಲಿನ ಶಾಸಕರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದನ್ನೂ ನಾವು ಖಂಡಿಸುತ್ತೇವೆ. ಶಾಸಕರು ಕೂಡಲೇ ಸ್ಪಂಧಿಸಬೇಕೆಂದು ಒತ್ತಾಯಿಸಿದರು.
ನೆಲ್ಲಿಕಾರು ಪಂಚಾಯಿತಿ ಪಿಡಿಒ ದಿನೇಶ್ ನಾಯ್ಕ್ ಅವರಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.
ಸಂಘದ ಮೂಡುಕೊಣಾಜೆ ವಲಯಾಧ್ಯಕ್ಷ ಮಹೇಂದ್ರ ಮಯಿಲೋಡಿ, ಪಡುಕೊಣಾಜೆ ವಲಯಾಧ್ಯಕ್ಷ ವಿಜೇಂದ್ರ ಎಸ್.ಪಿ., ಸಂತ್ರಸ್ತೆ ವಸಂತಿ ಪೂಜಾರಿ, ಹೋರಾಟದ ಪ್ರಮುಖರಾದ ಶೇಖರ್ ಮೂಡಾರು, ದಿನೇಶ್ ಪೂಜಾರಿ, ನೆಲ್ಲಿಕಾರು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

mbd_sep1_6(a)

mbd_sep1_6

By suddi9

Leave a Reply

Your email address will not be published. Required fields are marked *