ವಿಟ್ಲ: ಯುವ ಕುಂಬಾರರ ಯಾನೆ ಕುಲಾಲರ ಸಂಘ ವಿಟ್ಲ ಇದರ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್, ವನಮಹೋತ್ಸವ ಮತ್ತು ಪ್ರತಿಭಾವಂತ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಶ್ರೀ ಕ್ಷೇತ್ರ ಮುಳಿಯದ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

o (5)
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶೇತಲತಾ ಆಟಿ ತಿಂಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳ ಮಹತ್ವ ತಿಳಿಸಿದರು. ಮಂಜೇಶ್ವರ ಕುಲಾಲರ ಸಂಘದ ಕಾರ್ಯಕಾರಿ ಸದಸ್ಯ ಸುಧೀರ್ ರಂಜನ್ ಕೆ ದೈಗೋಳಿ ಅತಿಥಿಯಾಗಿ ಭಾಗವಹಿಸಿದ್ದರು. ಮಾತೃ ಸಂಘದ ಕಾರ್ಯದರ್ಶಿ ರವಿ ಕುಮಾರ್ ಕಟ್ಟೆ ವೇದಿಕೆಯಲ್ಲಿದ್ದರು.
ದೀಕ್ಷಾ ಪ್ರಾರ್ಥಿಸಿದರು. ವೇದಾವತಿ ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಸಂಘದ ಅಧ್ಯಕ್ಷ ವಿಜಯಕುಮಾರ್ ಕೋಡಿ ಸಭಾಧ್ಯ್ಷತೆ ವಹಿಸಿ ಪ್ರಸ್ತಾವಿಸಿದರು.o (4)

ಗೌರವಾಧ್ಯಕ್ಷ ಉಮೇಶ ಕಾಶಿಮಠ ವಂದಿಸಿದರು. ಸೋಮನಾಥ ಮಿತ್ತೂರು ನಿರೂಪಿಸಿದರು. ಸದಸ್ಯರಾದ ಪದ್ಮನಾಭ ಕಟ್ಟೆ, ವಿನೋದ್ ಕುಮಾರ್ ಕೋಡಿ, ಅರುಣ್ ಕುಮಾರ್ ಕೋಡಿ,ಕುಲದೀಪ ಅಳಿಕೆ, ಚರಣ್ ಆಲಂಗಾರು, ಅಕ್ಷತ್ ಚಂದಪ್ಪಾಡಿ, ಲೋಕೇಶ್ ಮಾಮೇಶ್ವರ, ಜಯರಾಮ ಸುರಂಬಡ್ಕ, ಯಾದವ ಕೂಡೂರು, ಪುನೀತ್ ದೈಗೋಳಿ, ವಸಂತ ಎರುಂಬು ಮತ್ತು ಚೇತನ್ ಸೇರಾಜೆ ಸಹಕರಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *