ಬಂಟ್ವಾಳ : ಬಿ.ಸಿ.ರೋಡ್ ರೋಟರಿ ಬಾಲ ಭವನ ಸಭಾಂಗಣದಲ್ಲಿ ಜು.22ರಂದು ನಡೆದ ದ.ಕ.ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಮತ್ತು ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್‍ನ ವಾರ್ಷಿಕ ಮಹಾಸಭೆಯಲ್ಲಿ 2018-22ನೇ ಸಾಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.2307pkt2(Baby Kunder)
ರಾಷ್ಟ್ರೀಯ ಕಬಡ್ಡಿ ಆಟಗಾರ, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಬೇಬಿ ಕುಂದರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಬಿ.ರಘುನಾಥ್ ಸೋಮಯಾಜಿ ಮಹಾಪೋಷಕರಾಗಿ, ಜಗನ್ನಾಥ್ ಚೌಟ, ಗೋಳ್ತಮಜಲು ಹನೀಫ್ ಹಾಜಿ ಮತ್ತು ರೊ| ಮಂಜುನಾಥ್ ಆಚಾರ್ಯ  ಪೋಷಕರಾಗಿ, ರೊ| ಪ್ರಕಾಶ್ ಕಾರಂತ್ ಗೌರವಾಧ್ಯಕ್ಷರಾಗಿ, ಪುಷ್ಪರಾಜ್ ಚೌಟ ಕಾರ್ಯಾಧ್ಯಕ್ಷರಾಗಿ, ರಮಾನಾಥ ವಿಟ್ಲ, ತುಂಗಪ್ಪ ಬಂಗೇರ, ಬಾಲಕೃಷ್ಣ ನರಿಕೊಂಬು, ಬಾಬು ಮಾಸ್ಟರ್, ಲೋಕನಾಥ ಶೆಟ್ಟಿ, ಮಹಮ್ಮದ್ ಝಕಾರಿಯ ಮತ್ತು ಗೋಪಾಲಕೃಷ್ಣ ತುಂಬೆ ಉಪಾಧ್ಯಕ್ಷರಾಗಿ, ಚಂದ್ರಶೇಖರ್ ಕರ್ಣ ಕಾರ್ಯದರ್ಶಿಯಾಗಿ, ಅಬ್ದುಲ್ ಲತೀಫ್ ನೇರಳಕಟ್ಟೆ ಸಹಕಾರ್ಯದರ್ಶಿಯಾಗಿ, ಉಮಾನಾಥ ರೈ ಮಾಣಿ ಕೋಶಾ„ಕಾರಿಯಾಗಿ, ಅಬ್ದುಲ್ ರಝಾಕ್ ಕುಕ್ಕಾಜೆ, ಸೇಸಪ್ಪ ಮೂಲ್ಯ ತುಂಬೆ, ಹಸೈನಾರ್ ಮಂಚಿ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಗುಂಡಿ ಇಬ್ರಾಹಿಂ ಮಂಚಿ ಮತ್ತು ಅಬ್ದುಲ್ ಹಮೀದ್ ಗೋಳ್ತಮಜಲ್ ಸಂಘಟನಾ ಕಾರ್ಯದರ್ಶಿಯಾಗಿ, ರತ್ನದೇವ್ ಪುಂಜಾಲಕಟ್ಟೆ ಪತ್ರಿಕಾ ಕಾರ್ಯದರ್ಶಿಯಾಗಿ, ಗಂಗಾಧರ ಸಪಲ್ಯ ಬಾಂಬಿಲ, ರವಿಚಂದ್ರ ಗೌಡ ಕನಪಾದೆ, ಇಬ್ರಾಹಿಂ ಕಲ್ಲಡ್ಕ, ರಾಜೀವ್ ಕಕ್ಯಪದವು, ಹಮೀದ್ ಮಂಚಿ ಬೈಲು ಮತ್ತು ಪೈಜಲ್ ಕುಕ್ಕಾಜೆ ಸದಸ್ಯರಾಗಿ, ಕೃಷ್ಣಪ್ಪ ಬಂಗೇರ, ಹಬೀಬ್ ಮಾಣಿ ಮತ್ತು ಎಸ್.ವಿ.ಎಸ್.ಕಾಲೇಜು ಸುಂದರ್ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *