ಮಂಗಳೂರು: ಶ್ರೀ ಕೃಷ್ಣ ವೇಷ ಸ್ಪರ್ಧೆ ಎನ್ನುವ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಸಂಯೋಜಿಸುತ್ತಿರುವ ‘ಕಲ್ಕೂರ ಪ್ರತಿಷ್ಠಾನ’ದ ನೆರಳಲ್ಲಿ ವಿದ್ಯಾರ್ಥಿಗಳಿಗೆ ‘ಶ್ರೀ ಕೃಷ್ಣ ಕಥಾ ಚಿತ್ರ ಬಿಡಿಸುವ ಸ್ಪರ್ಧೆ ಜರಗಲಿದೆ. ಆಯ್ಕೆಯಾದ ಚಿತ್ರಗಳನ್ನು ‘ಶ್ರೀ ಕೃಷ್ಣ ದರ್ಶನ’ ಚಿತ್ರಕಥಾ ಮಾಲಿಕೆ ಪುಸ್ತಕದಲ್ಲಿ ಪ್ರಕಟಿಸಲಾಗುವುದು.
• ಶ್ರೀ ಕೃಷ್ಣನ ಜನ್ಮ, ಬಾಲ್ಯ, ಸಾಹಸ, ಮಹಿಮೆಗಳನ್ನು ಸಾರುವ ದೃಶ್ಯಗಳನ್ನು ಚಿತ್ರಿಸಬೇಕು.
• ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆ ಮಾದರಿಯ ಚಿತ್ರಗಳಾಗಿರಬೇಕು.
• ವಾಟರ್ ಕಲರ್ ಚಿತ್ರಗಳಾಗಿರಬೇಕು
• ಚಿತ್ರಕ್ಕೆ ಶಿರ್ಷಿಕೆ ಎರಡು ಸಾಲಿನ ಕಥಾ ವಿವರಣೆ ಬರೆದಿರಬೇಕು
• ಉದಾ: ಕಾಳಿಂಗ ಮರ್ದನ: ಕಾಳಿಂದಿ ಮಡುವಿನಲ್ಲಿ ಬಾಲಕೃಷ್ಣ ಕಾಳಿಂಗವನ್ನು ಮರ್ದಿಸುತ್ತಿದ್ದಾನೆ ಕಾಳಿಂಗನ ಪತ್ನಿಯರು ಭಯದಿಂದ ಬೇಡಿಕೊಳ್ಳುತ್ತಿದ್ದಾರೆ.
ಸ್ಪರ್ಧಾ ವಿಭಾಗಗಳು/ನಿಯಮಗಳು
• 6ನೇ ತರಗತಿ ಮೇಲ್ಪಟ್ಟು ಪಿ.ಯು.ಸಿ. ತನಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
• ಚಿತ್ರದ ಅಳತೆ 10×14 ಇಂಚು ಇರತಕ್ಕದ್ದು
• ಮೊದಲ ಸುತ್ತಿನ ಸ್ಪರ್ಧೆ: ಮಕ್ಕಳು ಚಿತ್ರ ಬಿಡಿಸಿ ಅಂಚೆ/ಕೊರಿಯರ್ ಮೂಲಕ ಸಂಚಾಲಕ ಶ್ರೀ ಜಾನ್ ಚಂದ್ರನ್ (9844284175) ಕಲ್ಕೂರ ಪ್ರತಿಷ್ಠಾನ ಶ್ರೀ ಕೃಷ್ಣ ಸಂಕೀರ್ಣ ಕೊಡಿಯಾಲ್ಬೈಲ್ ಮಂಗಳೂರು ಈ ವಿಳಾಸಕ್ಕೆ ಚಿತ್ರಗಳನ್ನು ತಾ. 29-7-2018 ರ ಮುಂಚಿತವಾಗಿ ತಲುಪಿಸಬೇಕು.
• ಮೊದಲ ಸುತ್ತಿನಲ್ಲಿ ಆಯ್ಕೆಯಾದ ಚಿತ್ರಗಾರರಿಗೆ ಅಂತಿಮ ಹಂತದ ಸ್ಪರ್ಧೆಯನ್ನು ಮಂಗಳೂರು/ಉಡುಪಿಯಲ್ಲಿ ನಡೆಯಲಿರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

