ಪ್ರತಿಯೊಬ್ಬ ಎನ್.ಎಸ್.ಎಸ್ ವಿದ್ಯಾರ್ಥಿಯೂ ಕೆಲಸ ಮತ್ತು ಸೇವೆಯ ಮಧ್ಯೆ ಇರುವ ವ್ಯತ್ಯಾಸವನ್ನು ಸರಿಯಾಗಿ ಮನದಟ್ಟು ಮಾಡಿಕೊಂಡಿರಬೇಕು. ಕೆಲಸ ಎಂದರೆ ಒಂದು ರೀತಿಯ ಅಪೇಕ್ಷೆ ಇರುತ್ತದೆ. ಆದರೆ ಸೇವೆ ಎನ್ನುವುದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸ ಎಂದು ಶ್ರೀ ವೆಂಕಟರಮಣ ಸ್ವಾವಿೂ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಲತಾ ಪೈ ಹೇಳಿದರು.

ಅವರು ಶ್ರೀ ವೆಂಕಟರಮಣ ಸ್ವಾವಿೂ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆಯನ್ನು ಉದ್ಘಾಟಿಸುತ್ತಾ ಮಾತನಾಡಿ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವುದು ರಾಷ್ಟ್ರೀಯ ಸೇವಾಯೋಜನೆ. ಎನ್.ಎಸ್.ಎಸ್ ಎಂದರೆ ವಿದ್ಯಾರ್ಥಿಗಳು ಸ್ವಪ್ರೇರಿತರಾಗಿ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ನನಗೆ ಸ್ವಲ್ಪ, ಆದರೆ ಸಮಾಜಕ್ಕೆ ಸರ್ವಸ್ವ ಎನ್ನುವ ಧ್ಯೇಯವೇ ಇಲ್ಲಿ ಮುಖ್ಯವಾಗಿದೆ. ಎನ್.ಎಸ್.ಎಸ್ ಎನ್ನುವುದು ಅದರಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಸುತ್ತಮುತ್ತಲಿನ ಎಲ್ಲರ ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಮಾತನಾಡಿ ಎನ್.ಎಸ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುವ್ಯದರಿಂದ ಅವರ ವ್ಯಕ್ತಿತ್ವವು ವಿಕಸನವಾಗುತ್ತದೆ ಎಂದರು.
ವಿದ್ಯಾರ್ಥಿನಿಯರಾದ ಶೃತಿ, ವಿದ್ಯಾಶ್ರೀ, ಯಶ್ವಿನಿ, ಧನ್ಯಶ್ರೀ ಮತ್ತು ಅನನ್ಯ ಎನ್.ಎಸ್.ಎಸ್. ಗೀತೆ ಹಾಡಿದರು. ಘಟಕ ನಾಯಕ ರಕ್ಷಿತ್ ಸ್ವಾಗತಿಸಿ, ಘಟಕ ನಾಯಕಿ ಚೈತ್ರಾ ವಂದಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ, ಗಣಿತಶಾಸ್ತ್ರ ಉಪನ್ಯಾಸಕಿ ಕವಿತ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಮೋಕ್ಷಾ ನಿರೂಪಿಸಿದರು.
ಉಪನ್ಯಾಸಕರಾದ ಭಾರತಿ ಪಿ., ಚೇತನ್ ಎಂ., ಲಕ್ಷ್ಮೀನಾರಾಯಣ ಕೆ., ಉಪಸ್ಥಿತರಿದ್ದರು. ಸಹಯೋಜನಾಧಿಕಾರಿಗಳಾದ ಶಾಲಿನಿ ಬಿ., ನಮಿತಾ ಬಿ.ಎಲ್, ವಿಜೇತಾ ನಾಯಕ್, ಪ್ರವೀಣ, ಅನಿತಾ ಜೇಕಬ್, ಸತ್ಯಪ್ರಸಾದ್ ಬಿ., ಸಂಧ್ಯಾ ಶೆಣೈ ಸಹಕರಿಸಿದರು.
